ಆರೋಪಿಯಿಂದ ಸುಳ್ಳು ಹೇಳಿಸಲು ಶತಪ್ರಯತ್ನ: ಎಸಿಪಿ ಅನುಷಾ ಅವರ ಗಮನಕ್ಕೆ….!

ಹುಬ್ಬಳ್ಳಿ: ಗಾಂಜಾ ಪ್ರಕರಣದಲ್ಲಿ ಅಮಾನತ್ತಾಗಿ ಪೊಲೀಸರ ಗೌರವವನ್ನ ಮೂರು ಕಾಸಿಗೆ ಹರಾಜಾಕಿರುವ “ಸರಕಾರಿ ವಂಚಕ” ರು ಇದೀಗ ಆರೋಪಿಗಳ ಮನೆ ಕಾಯುತ್ತಿದ್ದು, ಎಸಿಪಿ ಜೆ.ಅನುಷಾರ ಮುಂದೆ ಸುಳ್ಳು ಹೇಳಿಸಲು ಹರಸಾಹಸ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.

ಗಾಂಜಾ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಆರೋಪಿಯನ್ನ ‘161’ ಬಿಡಿಸಿ ಕಳಿಸಿದ್ದ ಗೋಕುಲ ರಸ್ತೆ ಪೊಲೀಸ್ ಠಾಣೆಯ ಅಮಾನತ್ತಾದ ಮಹಿಳಾ ಪೊಲೀಸ್, ಇದೀಗ ಭದ್ರಾಪೂರದ ಆರೋಪಿಯ ಛಾವಣಿಯಲ್ಲಿ ಕುಳಿತು ಹೇಳಿಕೆ ಬದಲಿಸುವ ಕುತಂತ್ರ ಮಾಡಿದ್ದಾರೆಂಬುದು ಗೊತ್ತಾಗಿದೆ.
ಗಾಂಜಾ ಆರೋಪಿಗಳನ್ನ ಬಿಟ್ಟು ಗಾಂಜಾ ಮಾರಾಟ ಮಾಡಿರೋ ಪ್ರಕರಣದಲ್ಲಿ ಈಗಾಗಲೇ ಡಿಸಿಪಿ ಕೆ.ರಾಮರಾಜನ್ ಮುಂದೆ ಹೇಳಿಕೆ ನೀಡಿದ್ದು, ಅದನ್ನೇ ಬದಲಿಸುವ ತಂತ್ರ ಹೆಣೆಯಲಾಗಿದೆ.
ತನ್ನ ‘ಒಳ’ ವಸ್ತುವಿನ ಬಗ್ಗೆಯೂ ಆರೋಪ ಮಾಡುವ ಷಡ್ಯಂತ್ರ ಮಾಡಿದ್ದ “ಕುರುಬನ ರಾಣಿ” ಇನ್ನೂ ತನ್ನ ಆಟವನ್ನ ಮುಂದುವರೆಸಿದ್ದು, ಕ್ಷುಲಕವಾಗಿ ನಡೆದುಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ.