5.390 ಕೆಜಿ ಗಾಂಜಾ ಸುಟ್ಟು ಹಾಕಿದ ಧಾರವಾಡ ಜಿಲ್ಲಾ ಪೊಲೀಸ್…!!!
ಧಾರವಾಡ: ಜಿಲ್ಲೆಯಲ್ಲಿ ದಾಖಲಾದ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಮಾದಕ ವಸ್ತುವಾದ ಗಾಂಜಾವನ್ನ ಪೊಲೀಸರು ತಾರಿಹಾಳದ ಪ್ಯಾಕ್ಟರಿಯೊಂದರಲ್ಲಿ ಸುಟ್ಟು ಹಾಕಿದ್ದಾರೆ.
ದಿನಾಂಕಃ 13-01-2025 ರಂದು ಧಾರವಾಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ 2023 ಹಾಗೂ 2024 ನೇ ಸಾಲಿನಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ 09 ಎನ್.ಡಿ.ಪಿ.ಎಸ್. ಪ್ರಕರಣಗಳಲ್ಲಿ ಜಪ್ತ ಮಾಡಲಾಗಿರುವ ಮಾದರಿ ಕುರಿತು ತೆಗೆದಿರಿಸಿದ ಗಾಂಜಾ ಹೊರತುಪಡಿಸಿ ಉಳಿದ ಒಟ್ಟು 5 ಕೆಜಿ 390 ಗ್ರಾಂ, ಗಾಂಜಾ ಮಾದಕ ವಸ್ತುವನ್ನು ಧಾರವಾಡ ಜಿಲ್ಲಾ “ Drug Disposal committee” ಯ ಸದರಸ್ಯರಾದ ಪೊಲೀಸ್ ಅಧಿಕಾರಿಗಳು ಹಾಗೂ ಮುಖ್ಯಾಧಿಕಾರಿಗಳು ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ, ಲಕಮನಹಳ್ಳಿ ಧಾರವಾಡ ರವರ ಸಮ್ಮುಖದಲ್ಲಿ M/s rio Green India Ltd (CBMWTF) Plot No:126 Tarihal Industrial area Tq: Hubballi ರವರಲ್ಲಿ, ಗಾಂಜಾವನ್ನು ಸುಟ್ಟು ನಾಶ ಪಡಿಸಲಾಯಿತು.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.