Posts Slider

Karnataka Voice

Latest Kannada News

ಹೊಸ ಪ್ರಕರಣ: ಲಾಡ್ಜಲ್ಲೇ ಗಾಂಜಾ ದಂಧೆ- ಐವರನ್ನ ಹಿಡಿದಿದ್ದು ಹೇಗೆ ಗೊತ್ತಾ..?

1 min read
Spread the love

ಉಡುಪಿ: ಪ್ರತಿಷ್ಠಿತ ಲಾಡ್ಜನಲ್ಲಿಯೇ ಬೀಡಾರ ಹೂಡಿ ಗಾಂಜಾ ಸಾಗಾಟ ಮಾಡುತ್ತ ಸೇವನೆ ಮಾಡುತ್ತಿದ್ದ ತಂಡವನ್ನ ಬೈಂದೂರ ಪ್ರದೇಶದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೆಲವೇ ದಿನಗಳ ಹಿಂದೆ ಇಬ್ಬರನ್ನ ಬಂಧನ ಮಾಡಿ 43 ಕೆಜಿ ಗಾಂಜಾವನ್ನ ವಶಕ್ಕೆ ಪಡೆಯಲಾಗಿತ್ತು.

ಈ ಹಿಂದಿನ ಪ್ರಕರಣದಲ್ಲಿ ಲಾರಿಯಲ್ಲಿ ಬ್ಯಾಂಬೋಗಳನ್ನ ಹಾಕಿ, ಅದರಲ್ಲಿ ಗಾಂಜಾ ತುಂಬಿದ್ದ ಕುರ್ತಪಾಂಡಿ ಮತ್ತು ವನುವಲ್ದಾರ ಎಂಬಾತನನ್ನ ಬಂಧನ ಮಾಡಲಾಗಿತ್ತು. ಹೊಸ ಪ್ರಕರಣದಲ್ಲಿ ಬ್ರಹ್ಮಾವರದ ಮಟಪಾಡಿ ನಿವಾಸಿ ಯೋಗೇಶ್ ಗಾಣಿಗ(24), ಕೇರಳ ತಿರುವನಂತಪುರಂ ನಿವಾಸಿ ಯದುನಾರಾಯಣ(21), ಬೈಂದೂರು ಬಿಜೂರು ನಿವಾಸಿ ಗುರುರಾಜ್ ಪೂಜಾರಿ(25), ಉಪ್ಪುಂದ ನಿವಾಸಿ ಸುನಿಲ್ ಪೂಜಾರಿ(26) ಹಾಗೂ ಬಿಜೂರು ನಿವಾಸಿ ರವಿ(25) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿ ಯೋಗೇಶ್ ಗಾಣಿಗ ಎಂಬಾತನ ಬ್ಯಾಗಿನಲ್ಲಿ 40 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಆರೋಪಿಗಳಿಗೆ ಭಟ್ಕಳ ಮೂಲದ ಶಬೀರ್ ಎಂಬಾತ ಗಾಂಜಾ ಸರಬರಾಜು ಮಾಡುತ್ತಿದ್ದ ಎಂದು ತನಿಖೆ ವೇಳೆಯಲ್ಲಿ ಗೊತ್ತಾಗಿದೆ. ಬ್ಯಾಗಿನಲ್ಲಿ ಗಾಂಜಾ ಸೇವಿಸಲು ಬಳಸುವ ಒಸಿಬಿ ಸ್ಲಿಮ್ ಪ್ರೀಮಿಯಂ ಎನ್ನುವ ಕಾಗದದ ಚೂರುಗಳು ಪತ್ತೆಯಾಗಿವೆ.

ಪೊಲೀಸರ ಮಾಹಿತಿಯ ಪ್ರಕಾರ್ Vivo Y-8 ಮಾದರಿಯ ಮೊಬೈಲ್-1,  Realme ಕಂಪೆನಿಯ ಮೊಬೈಲ್-1, OPPO ಕಂಪೆನಿಯ ಮೊಬೈಲ್-1,  NOKIA ಕಂಪೆನಿಯ ಮೊಬೈಲ್-1,  Redmi Note7 ಮೊಬೈಲ್-1,  Vivo V-9  ಮೊಬೈಲ್-1,  Honda Dio ಮಾದರಿಯ KA-20-EJ-6456 ಸ್ಕೂಟರ್,  TVS NTORQ ಮಾದರಿಯ KA-20-EU-7385 ಸ್ಕೂಟರ್,  YAMAH FZ ಮಾದರಿಯ KA-20-ES-1578 ಮೋಟಾರು ಸೈಕಲ್ ನ್ನು ವಶಕ್ಕೆ ಪಡೆಯಲಾಗಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು  ಮೌಲ್ಯ 1,71,500 ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 161/2020 ಕಲಂ: 8 (ಸಿ), 20(ಬಿ), 27(ಬಿ) ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ.


Spread the love

Leave a Reply

Your email address will not be published. Required fields are marked *