ಕಲಘಟಗಿಯಲ್ಲಿ “ಗಾಂಜಿ’ಗನ ಬಂಧನ: ಹಳ್ಳಿಯಲ್ಲೇ ನಡೆದಿತ್ತು ದಂಧೆ..!
ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಹರವಿ ಗ್ರಾಮದ ವ್ಯಕ್ತಿಯೋರ್ವನನ್ನ ಬಂಧಿಸಿರುವ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದನ್ನ ಪತ್ತೆ ಹಚ್ಚಿ, ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.
ನೆಲ್ಲಿಹರವಿ ಗ್ರಾಮದ ನಾಗಪ್ಪ ಬಸವಣ್ಣೆಪ್ಪ ಉಣಕಲ್ ಎಂಬಾತನೇ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯಾಗಿದ್ದು, ಕಲಘಟಗಿಯ ಕೆಎಚ್ ಬಿ ಕಾಲನಿಯ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಆರೋಪಿಯನ್ನ ಬಂಧನ ಮಾಡಿದ್ದಾರೆ.
ಬಂಧಿತನಿಂದ 504ಗ್ರಾಂ ಗಾಂಜಾ ಬೀಜ ಮತ್ತು ಹೂಗಳುಳ್ಳ ಎಲೆಗಳನ್ನ ಮತ್ತು 150 ರೂಪಾಯಿಗಳನ್ನ ವಶಕ್ಕೆ ಪಡೆದಿದ್ದಾರೆ. ಪಿಎಸೈ ಪಿ.ವೈ.ಕಾಳೆ ನೇತೃತ್ವದಲ್ಲಿ ಆರೋಪಿಯನ್ನ ಬಂಧನ ಮಾಡಲಾಗಿದ್ದು, ವೃತ್ತ ನಿರೀಕ್ಷಕ ವಿಜಯ ಬಿರಾದಾರ ಮಾರ್ಗದರ್ಶನ ಮಾಡಿದ್ದರು.
ಗ್ರಾಮೀಣ ಪ್ರದೇಶದಿಂದ ತಂದು ಗಾಂಜಾವನ್ನ ಮಾರಾಟ ಮಾಡುವವರ ಮೇಲೆ ಹದ್ದಿನ ಕಣ್ಣೀಟ್ಟಿರುವ ಪೊಲೀಸರು, ಇನ್ನುಳಿದ ಗ್ರಾಮದಲ್ಲಿಯೂ ನಡೆಯುತ್ತಿರುವ ಗಾಂಜಾ ದಂಧೆಯನ್ನ ಮಟ್ಟ ಹಾಕಲು ಕ್ರಮ ಜರುಗಿಸಿದ್ದಾರೆ.