ಗಂಡ ಜವಾನನಿರೋ ಪಂಚಾಯತಿಗೆ ಹೆಂಡತಿ ಅಧ್ಯಕ್ಷೆ..!
1 min readಹಾವೇರಿ: ಗ್ರಾಮ ಪಂಚಾಯತಿಗಳಲ್ಲಿ ಎಲ್ಲರಿಗೂ ಅಧಿಕಾರ ಸಿಗತ್ತೆ. ಅದು ಯಾವತ್ತೂ ಧನಿಕರ ಸ್ವತ್ತಲ್ಲ ಎಂದು ಸಾರುವುದರಲ್ಲಿ ಗ್ರಾಮ ಪಂಚಾಯತಿ ಅಧಿಕಾರ ತೋರಿಸಿಕೊಡತ್ತೆ. ಹಾಗಾಗಿಯೇ ಅಪರೂಪದ ಪ್ರಕರಣಗಳು ಅಲ್ಲಲ್ಲಿ ಕಾಣ ಸಿಗುತ್ತವೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮ ಪಂಚಾಯತಿಯಲ್ಲಿ ವಿಶೇಷವಾದ ಘಟನೆಯೊಂದು ನಡೆದಿದೆ. ಇದೇ ಪಂಚಾಯತಿಯಲ್ಲಿ ಕಳೆದ 23 ವರ್ಷದಿಂದ ಜವಾನ್ ಕೆಲಸ ಮಾಡುತ್ತಿರುವನ ಮಡದಿಯಿಂದು, ಇದೇ ಪಂಚಾಯತಿಗೆ ಅಧ್ಯಕ್ಷೆಯಾಗಿದ್ದಾಳೆ.
ಹೌದು.. ಬಸವರಾಜ ಎಂಬ ವ್ಯಕ್ತಿ ಹಲವು ವರ್ಷಗಳಿಂದ ಬೈಚವಳ್ಳಿ ಪಂಚಾಯತಿಯಲ್ಲಿ ಜವಾನ್ ಕೆಲಸ ಮಾಡುತ್ತಿದ್ದಾನೆ. ಮದುವೆಯಾಗುವಾಗ ಕೂಡಾ ತಾನೂ ಪಂಚಾಯತಿ ಜವಾನ್ ಎಂದು ಹೇಳಿಯೇ ಮದುವೆ ಮಾಡಿಕೊಂಡಿದ್ದ. ಅಂದು ಜವಾನ್ ಬಸವರಾಜ ಮದುವೆಯಾಗಿ ಬಂದ ಬೈಚವಳ್ಳಿ ಗ್ರಾಮದ ಸೊಸೆ, ಇಂದು ಅದೇ ಊರಿನ ಪಂಚಾಯತಿ ಅಧ್ಯಕ್ಷೆಯಾಗಿದ್ದಾಳೆ.
ಬಸವರಾಜನ ಪತ್ನಿ ಗಂಗಮಾಳವ್ವ ಅಧ್ಯಕ್ಷೆಯಾಗಿದ್ದು, ಗಂಡ ಬಸವರಾಜ ಮಾತ್ರ ನಾನು ಅದೇ ಪಂಚಾಯತಿಯಲ್ಲಿ ಜವಾನ್ ಕೆಲಸ ಬಿಡುವುದಿಲ್ಲ ಎಂದು ಹೇಳುತ್ತಿದ್ದಾನೆ. ಪಂಚಾಯತ್ ರಾಜ್ ವ್ಯವಸ್ಥೆಯೇ ಇದಕ್ಕೇಲ್ಲ ಕಾರಣವಾಗಿದ್ದು ಎನ್ನುವುದನ್ನ ಯಾರೂ ಮರೆಯುವಂತಿಲ್ಲ..