ಗಳಗಿ ಹುಲಕೊಪ್ಪದಲ್ಲಿ ಕಾಡು ಹಂದಿ ದಾಳಿ: ರೈತನ ಸ್ಥಿತಿ ಗಂಭೀರ….!!!
ಧಾರವಾಡ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿದ ಪರಿಣಾಮ, ಗಂಭೀರವಾದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ ಆರ್‌ಐನಲ್ಲಿ ದಾಖಲು ಮಾಡಲಾಗಿದೆ.
ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಸಿದ್ದಲಿಂಗಪ್ಪ ಹೂಜಿ(52) ಗಾಯಗೊಂಡ ರೈತನಾಗಿದ್ದು, ಮುಖದ ಒಂದು ಭಾಗ ಸಂಪೂರ್ಣವಾಗಿ ಹೊರಬಿದ್ದಿದೆ.
ಹೊಲದಲ್ಲಿದ್ದಾಗ ಕಾಡು ಹಂದಿ ದಾಳಿ ಮಾಡಿದ್ದು, ಕೊಂಬಿನಿಂದ ತಿವಿದ ಪರಿಣಾಮ ತೀವ್ರ ಗಾಯವಾಗಿದೆ. ಗಾಯಾಳು ರೈತ ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.