ಗದಗ ಜಿಲ್ಲಾಧ್ಯಕ್ಷರಾಗಿ ಅರುಣಕುಮಾರ ತಿರ್ಲಾಪೂರ
ಧಾರವಾಡ: ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಅರುಣಕುಮಾರ ತಿರ್ಲಾಪೂರನ್ನ ರಾಜ್ಯ ಕಾರ್ಯಾಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತ ಬಸವರಾಜ ಆನೆಗುಂದಿ ಆಯ್ಕೆ ಮಾಡಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ, ಸದಾಕಾಲ ಬಡವರ, ನಿರ್ಗತಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ತಾವುಗಳು ಜಿಲ್ಲಾಧ್ಯಕ್ಷರಾದ ನಂತರ ಸಮಿತಿಯ ಮೂಲ ಉದ್ದೇಶವನ್ನ ಸಾಕಾರಗೊಳಿಸುವಂತ ಕಾರ್ಯಗಳನ್ನ ಮಾಡಬೇಕೆಂದು ಬಸವರಾಜ ಆನೇಗುಂದಿ, ನೂತನ ಅಧ್ಯಕ್ಷರಿಗೆ ಹೇಳಿದ್ದಾರೆ.