ಮರಳಿ ಬಾರದೂರಿಗೆ ಹೊರಟ ಗದಗ ಜಿಲ್ಲೆಯ TV9 ಕ್ಯಾಮರಾಮನ್ “ರವಿ ಗಿರಣಿ”….

ಗದಗ: ರಾಜ್ಯದ ಪ್ರತಿಷ್ಠಿತ ಕನ್ನಡ ವಾಹಿನಿಯ ಕ್ಯಾಮರಾಮನ್ ರವಿ ಗಿರಣಿ ಅವರು ಅಕಾಲಿಕವಾಗಿ ಸಾವಿಗೀಡಾಗಿದ್ದು, ಕುಟುಂಬವೂ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ರವಿ ಗಿರಣಿ ಗದಗ ಜಿಲ್ಲೆಯ ಕ್ಯಾಮರಾಮನ್ ಆಗಿ ಟಿವಿ9 ಗೆ ಸೇರಿಕೊಂಡಿದ್ದರು. ತದನಂತರ ಹುಬ್ಬಳ್ಳಿ ಧಾರವಾಡದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು.
ನ್ಯೂಸ್‌ಗೆ ಬೇಕಾಗುವ ದೃಶ್ಯಾವಳಿಗಳನ್ನ ಸೆರೆ ಹಿಡಿಯುವಲ್ಲಿ ರವಿ ಗಿರಣಿ, ಪರಿಣಿತನಾಗಿದ್ದರು. ಹಾಗಾಗಿಯೇ ಒಂದೇ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದರು.
ಎರಡು ಮಕ್ಕಳನ್ನ ಹೊಂದಿರುವ ರವಿ ಗಿರಣಿ ಅಕಾಲಿಕವಾಗಿ ಸಾವಿಗೀಡಾಗಿದ್ದು, ಪತ್ರಕರ್ತರ ವಲಯದಲ್ಲಿ ನೋವನ್ನುಂಟು ಮಾಡಿದೆ.
ಸಂತಾಪ: ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ರವಿ ಗಿರಣಿ ಅವರ ಕುಟುಂಬಕ್ಕೆ ರವಿಯ ಸಾವಿನ ನೋವನ್ನ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.