Exclusive- ಪ್ರೂಟ್ ಇರ್ಫಾನ್ ಹತ್ಯೆ: ಮತ್ತೊಂದು ಪಿಸ್ತೂಲಗಾಗಿ ಹುಬ್ಬಳ್ಳಿಯಲ್ಲಿ ಹುಡುಕಾಟ
ಹುಬ್ಬಳ್ಳಿ: ಧಾರವಾಡದ ರೌಡಿ ಶೀಟರ್ ಇರ್ಫಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನ್ ಹತ್ಯೆ ಪ್ರಕರಣದಿಂದ ದಿನದಿಂದ ದಿನಕ್ಕೆ ಹೊಸ ಹೊಸ ರೂಪವನ್ನ ತಳೆಯುತ್ತಿದೆ. ಈಗಾಗಲೇ ಹತ್ಯೆ ಮಾಡಿದ್ದ ಪಿಸ್ತೂಲಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆಂದು ಎಲ್ಲರಿಗೂ ತಿಳಿದಿತ್ತು. ಆದರೆ, ಕೊನೆಗಳಿಗೆಯಲ್ಲಿ ಕೈಕೊಟ್ಟ ಪಿಸ್ತೂಲವೊಂದನ್ನ ಹುಬ್ಬಳ್ಳಿಯ ರಾಜಕಾಲುವೆಯೊಂದರಲ್ಲಿ ಎಸೆದು ಹೋಗಿರುವುದನ್ನ ಆರೋಪಿಗಳು ಬಾಯಿಬಿಟ್ಟಿರುವುದು ಇದೀಗ ಮತ್ತೆ ಹುಡುಕಾಟಕ್ಕೆ ಕಾರಣವಾಗಿದೆ.
ಆಗಸ್ಟ್ ಮೊದಲ ವಾರದಲ್ಲೇ ಪ್ರೂಟ್ ಇರ್ಫಾನ್ ಹತ್ಯೆಯಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಬೈಕ್ ಕೊಟ್ಟ, ಹಣ ಕೊಟ್ಟ, ಮೊಬೈಲನಲ್ಲಿ ಮಾತನಾಡಿದ, ಕೊನೆ ಕೊನೆಗೆ ಹತ್ಯೆ ಮಾಡಿದ ಆರೋಪಿಗಳನ್ನ ಬಂಧನ ಮಾಡಿಲಾಗಿದೆ. ಅಷ್ಟೇ ಅಲ್ಲ, ಕೊಲೆ ಮಾಡಿಸಿದ ನಟೋರಿಯಸ್ ಶಾರ್ಫ್ ಶೂಟರನ ವಿಚಾರಣೆಯನ್ನೂ ಮಾಡಲಾಗಿದೆ. ಇಷ್ಟೇಲ್ಲಾ ನಡೆಯುತ್ತಿದ್ದಾಗಲೇ ಮಹತ್ವದ ಸುಳಿವೊಂದು ದೊರಕಿದೆ.
ಬೈಕ್ ಚಲಾಯಿಸಿದ ಅಪ್ತಾಬ್ ಎಂಬ ಯುವಕ ಬಳಕೆ ಮಾಡಲು ಇಟ್ಟುಕೊಂಡಿದ್ದ ಪಿಸ್ತೂಲ್ ಕೊನೆಗಳಿಗೆಯಲ್ಲಿ ಕೈಕೊಟ್ಟಿದ್ದರಿಂದ ಗುಜರಾತ ಭವನ ಬಳಿಯಿರುವ ರಾಜಕಾಲುವೆಯಲ್ಲಿ ಅದನ್ನ ಒಗೆದು ಹೋಗಿರುವುದನ್ನ ಹೇಳಿಕೊಂಡಿದ್ದಾನೆ. ಹೀಗಾಗಿಯೇ ರಾಜಕಾಲುವೆಯಲ್ಲೀಗ ಪಿಸ್ತೂಲನ್ನ ಹುಡುಕುವ ಪ್ರಯತ್ನಕ್ಕೆ ಪೊಲೀಸರು ಮುಂದಾಗಿದ್ದಾರೆ.
ಪೊಲೀಸ್ ಕಮೀಷನರ್ ಆರ್.ದಿಲೀಪ ಮಾರ್ಗದರ್ಶನದಲ್ಲಿ ನಡೆದಿರುವ ತನಿಖೆಯನ್ನ ಹಿರಿಯ ಅಧಿಕಾರಿಗಳ ಜೊತೆಗೆ ಇನ್ಸಪೆಕ್ಟರ ಶಿವಾನಂದ ಕಮತಗಿ ನಡೆಸುತ್ತಿದ್ದು, ಪ್ರೂಟ್ ಇರ್ಫಾನ ಹತ್ಯೆಯ ವಿಕಾರ ರೂಪಗಳು ಒಂದೊದಾಗಿ ಇನ್ನೂ ಬಯಲಿಗೆ ಬರುತ್ತಿವೆ.


