ಪ್ರೂಟ್ ಇರ್ಫಾನ್ ಹತ್ಯೆ ಪ್ರಕರಣ: ಹಲವರಿಗೆ ಜಾಮೀನು…!
1 min readಧಾರವಾಡ: ಕಳೆದ ವರ್ಷ ಆಗಸ್ಟ್ ನಲ್ಲಿ ನಡೆದಿದ್ದ ಪ್ರೂಟ್ ಇರ್ಫಾನ್ ಅಲಿಯಾಸ್ ಇರ್ಫಾನ್ ಹಂಚಿನಾಳ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಾಲ್ವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ಗೊತ್ತಾಗಿದೆ.
ಉತ್ತರ ಕನ್ನಡ ಜಿಲ್ಲೆ ಮುಂಡಗೋಡದ ಪ್ರೂಟ್ ಇರ್ಫಾನ್ ಧಾರವಾಡದಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇದೇ ಸಮಯದಲ್ಲಿ ಮದುವೆ ಸಮಾರಂಭಕ್ಕೆ ಹಳೇಹುಬ್ಬಳ್ಳಿಯ ಹೊಟೇಲ್ ಬಳಿ ನಿಂತಾಗ, ಬೈಕಿನಲ್ಲಿ ಬಂದಿದ್ದ ಶಾರ್ಫ್ ಶೂಟರ್ಸ್ ಹತ್ಯೆ ಮಾಡಿ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಒಟ್ಟು 15 ಜನರನ್ನ ಬಂಧನ ಮಾಡಿ, ಜೈಲಿಗೆ ಕಳಿಸಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಹುಬ್ಬಳ್ಳಿ-ಧಾರವಾಡ ಮೂಲದ ನಾಲ್ವರಿಗೆ ಜಾಮೀನು ಮಂಜೂರು ಮಾಡಿದೆ.
ಪ್ರೂಟ್ ಇರ್ಫಾನ್ ಕೊಲೆ ಕೇಸಿನಲ್ಲಿ ಹಲವು ತಿರುವುಗಳು ಕಂಡು ಬಂದಿದ್ದವು. ಮೈಸೂರು ಜೈಲಿನಲ್ಲಿರುವ ಬಚ್ಚಾಖಾನ್ ಕೂಡಾ ತನ್ನದು ಪಾತ್ರವಿರುವ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದನೆಂದು ಗೊತ್ತಾಗಿದೆ.