ರೈತರಿಗಾಗಿ ಹೋರಾಟ ನಡೆಯುತ್ತಿದ್ದಾಗಲೇ “ಆ” ರೈತರು ಪ್ರಾಣ ಕಳೆದುಕೊಂಡರು..!
ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮ ದಲ್ಲಿ ಸೋಮವಾರ ಸಂಜೆ ಐದು ಗಂಟೆ ಸುಮಾರಿಗೆ ಮುನ್ನಗೌಡನ ಜಮೀನಿನಲ್ಲಿ ಮನೆಗೆ ಬರುತ್ತಿರುವ ಸಮಯದಲ್ಲಿ ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ಸಾವನ್ನಪ್ಪಿದ ಘಟನೆ ಜರುಗಿದೆ.
ರೈತರಾದ ಬಸ್ಸಪ್ಪ(30) ಹಾಗೂ ಮೌಲಾಸಾಬ(28) ತಮ್ಮ ಜಾನುವಾರುಗಳೊಂದಿಗೆ ಮುನ್ನಗೌಡನ ಜಮೀನು ದಾಟುತ್ತಿರುವ ಸಂದರ್ಭದಲ್ಲಿ ಅವರ ಕೃಷಿ ಪಂಪ್ ಸೆಟ್ ವಿದ್ಯುತ್ ಸರ್ವಿಸ್ ವೈರ್ ಕಡಿದು ತಂತೀ ಬೇಲಿನ ಮೆಲೆ ಬಿದ್ದಿತ್ತು, ರೈತರಿಬ್ಬರಿಗೆ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬೇಲಿ ದಾಟಿ ಎತ್ತು ಬರುತ್ತಿರುವಾಗ ಸಡನ್ನಾಗಿ ಬಿದ್ದಿದೆ. ಇದು ಏಕೆ ಬಿತ್ತು ಎಂದು ನೋಡಲು ಹೋಗಿ, ಇಬ್ಬರೂ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ತದನಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಶವಗಳನ್ನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.
ಪ್ರಕರಣ ವಡಗೇರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಪೊಲೀಸ್ ಮತ್ತು ಜೆಸ್ಕಾಂ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.