14ಸಾವಿರ ಕೋಟಿ ರೂಪಾಯಿ ಬೆಳೆಸಾಲ ನೀಡಲು ಸಚಿವ ಎಸ್ ಟಿ ಸೋಮಶೇಖರ್ ಆದೇಶ
1 min readಬೆಂಗಳೂರು: ಸಹಕಾರ ಇಲಾಖೆಯ 4 ಡಿವಿಜನ್ ಮೈಸೂರು, ಬೆಂಗಳೂರು, ಬೆಳಗಾವಿ, ಗುಲ್ಬರ್ಗ ಜೊತೆಗೆ ಸಭೆ ಮಾಡಿದ್ದೇನೆ. ಜೊತೆಗೆ ಬೆಂಗಳೂರು ಡಿವಿಜನ್ 9 ಜಿಲ್ಲೆಯ ಡಿಪಾರ್ಟ್ಮೆಂಟ್ ಅಧಿಕಾರಿಗಳ ಜೊತೆಗೆ ಸಭೆ ಮಾಡಲಾಗಿದೆ. 94241 ರೈತರಿಗೆ – 712 ಕೋಟಿ ಹಣ ಸಾಲ ಕೊಡಲಾಗಿದೆ. ಕಳೆದ ಬಾರಿ 19-20ನೇ ಸಾಲಿಗೆ 135977 ಜನರಿಗೆ 916 ಕೋಟಿ ಸಾಲ ಕೊಡಲಾಗಿದೆ. ಈ ವರ್ಷ ಎರಡು ಬೆಳೆ ಸಾಲ ಸಾಲ 14 ಸಾವಿರ ಕೋಟಿ ಸಾಲ ಕೊಡಬೇಕು ಎಂದು ಎಲ್ಲಾ ಡಿಸಿಸಿ ಬ್ಯಾಂಕ್ ಗಳಿಗೆ ನಿರ್ದೇಶನ ಕೊಡಲಾಗಿದೆ ಎಂದು ಸಹಕಾರ ಸಚಿವ ೆಸ್.ಟಿ.ಸೋಮಶೇಖರ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಕೋವಿಡ್ ಇರುವುದರಿಂದ ತಾಲ್ಲೂಕು ಕಚೇರಿ ಕೆಲಸ ಮಾಡುತ್ತಿಲ್ಲ. ರೆವಿನ್ಯೂ ಆಫೀಸ್ ರ್ ಗಳ ಮೂಲಕ ಕೆಲಸ ಮಾಡಲಾಗ್ತಿದೆ. ಎಸ್ ಸಿ, ಎಸ್ ಟಿ ವರ್ಗಕ್ಕೆ ವಿಶೇಷ ಪ್ರೋಗ್ರಾಂ ಮಾಡಿ , ಟಾರ್ಗೆಟ್ ಹಣವನ್ನು ಕೊಡಲು ತಯಾರಿ ಮಾಡಲಾಗಿದೆ. ಬೆಂಗಳೂರಿನ 3 ರಿಂದ 4 ಜಿಲ್ಲೆಗಳಲ್ಲಿ ಎಸ್ ಸಿ , ಎಸ್ ಟಿ ಜನರಿಗೆ ಸಾಲ ಕೊಡಲು ಸಹಕಾರಿ ಆಗಿದೆ. ಎಲ್ಲಾ ಕಡೆ ಟಾರ್ಗೆಟ್ ಕಂಪ್ಲೀಟ್ ಮಾಡಬೇಕು ಎಂದು ಹೇಳಲಾಗಿದೆ. ಒಂದೊಂದು ಜಿಲ್ಲೆಯ ಎಸ್ ಸಿ , ಎಸ್ ಟಿ ರೈತರು ಎಷ್ಟು ಇದ್ದಾರೆ ಎಂದುಕೊಂಡು ಟಾರ್ಗೆಟ್ ಮಾಡುತ್ತೇವೆ ಎಂದರು.