ಶಿವಳ್ಳಿಯ ರೈತನ ಮಗಳು ಅಮೆರಿಕಾಗೆ… ಮಾಡಿದ ಸಾಧನೆಗೆ ಸೆಲ್ಯೂಟ್…!!!
1 min readಅಮೆರಿಕಾದಲ್ಲಿ ಎಂ ಎಸ್ ಮಾಡಲು ಹೊರಟ ಶಿವಳ್ಳಿ ಗ್ರಾಮದ ರೈತನ ಮಗಳು ವರ್ಷ ಅವರಿಗೆ ಹುಬ್ಬಳ್ಳಿಯಲ್ಲಿ ಸತ್ಕರಿಸಿ, ಬೀಳ್ಕೊಡಲಾಯಿತು
ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದ ರೈತ ಕೆಂಚಪ್ಪ ಲಂಬಿ ಇವರ ಮಗಳು ವರ್ಷ ಇಂದು ಅಮೆರಕಾದಲ್ಲಿ ಎಂಎಸ್ ಉನ್ನತ ವ್ಯಾಸಂಗ ಮಾಡಲು ತೆರಳಿದಳು. ಅವರಿಗೆ ಹುಬ್ಬಳ್ಳಿಯ ಅಕ್ಕಾ ಪೌಂಡೇಶನ ಟ್ರಸ್ಟ್ ಹಾಗೂ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸಂಸ್ಥೆಯ ವತಿಯಿಂದ ಶುಭಹಾರೈಸಿ ಬೀಳ್ಕೊಡಲಾಯಿತು.
ಟ್ರಸ್ಟಿನ ಅಧ್ಯಕ್ಷ ವೀರಪ್ಪ ಅರಕೇರಿ ಮಾತನಾಡಿ, ಒಬ್ಬ ರೈತನ ಮಗಳು ಶಿಕ್ಷಣದಲ್ಲಿ ಉನ್ನತ ವ್ಯಾಸಂಗ ಮಾಡಲು ತೆರಳುತ್ತಿರುವುದು, ನಮ್ಮ ಜಿಲ್ಲೆಯ ಸೌಭಾಗ್ಯ, ಅವಳಿಗೆ ಚಿಕ್ಕಂದಿನಿಂದಲೇ ಪ್ರಾಥಮಿಕ ಮತ್ತು ಪ್ರೌಢ, ಉನ್ನತ ಶಿಕ್ಷಣ ಕೊಡಿಸಿದ ವರ್ಷಳ ದೊಡ್ಡಪ್ಪ ಪ್ರಕಾಶ, ದೊಡ್ಡಮ್ಮ ವಿದ್ಯಾ ಅವಳನ್ನು ಸಾಕಿ ಸಲುಹಿ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಬರುವಂತೆ ಮಾಡಿದವರು. ಅವರಿಗೆ ಈ ಯಶಸ್ಸು ಸಲ್ಲಲಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಅಧ್ಯಕ್ಷೆ ಎಲ್.ಐ. ಲಕ್ಕಮ್ಮನವರ, ವರ್ಷ ನಮ್ಮ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಹೆಮ್ಮೆಯ ಮಗಳು. ಇವಳು ಅಮೆರಕಾದಲ್ಲಿ ಉನ್ನತ ಶಿಕ್ಷಣ ಮುಗಿಸಿ, ನಮ್ಮ ತಾಯ್ನಾಡಿಗೆ ಮರಳಿ ನಮ್ಮ ನಾಡಿಗೆ ಇವರು ಹೆಚ್ಚಿನ ಕೊಡುಗೆ ನೀಡಲಿ. ತಂದೆ-ತಾಯಿ, ಬಂಧು ಬಳಗ ಹೆಚ್ಚಾಗಿ ದೊಡ್ಡಪ್ಪ ದೊಡ್ಡಮ್ಮ ಇವರ ಹೆಸರನ್ನು ತರಲಿ. ರೈತನ ಮಗಳ ಸಾಧನೆ ನಮಗೆ ಸಂತಸ ತಂದಿದೆ ಎಂದರು. ಸಮಾಜ ಸೇವಕರು, ರೈತರು ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸದಸ್ಯ ಮಲ್ಲಪ್ಪ ಹೊಸ್ಕೇರಿ ಹಾಗೂ ಅವರ ತಂದೆ ಕೆಂಚಪ್ಪ ತಾಯಿ ಸುನೀತಾ ಸೇರಿದಂತೆ ಕುಟುಂಬದವರು ಉಪಸ್ಥಿತರಿದ್ದರು.