ರೈತರ ಪರವಾಗಿ ಅಹೋರಾತ್ರಿ ‘ಧರಣಿ’ಗಿಳಿದ “ಧಣಿ”- ದೇಶದ ಬೆನ್ನೆಲುಬಿಗೆ ಅನ್ಯಾಯ ಬೇಡವೆಂದ ಬಿಜೆಪಿ…

ಧಾರವಾಡ: ನಿರಂತರ ಮಳೆಯಿಂದ ರೈತನ ಬೆಳೆ ಹಾಳಾಗಿದ್ದು, ಸರಕಾರ ಕಣ್ಣು ಮುಚ್ಚಿ ಕುಳಿತುಕೊಂಡಿದೆ ಎಂದು ಆರೋಪಿಸಿ ಧಾರವಾಡ-71 ಕ್ಷೇತ್ರದ ಬಿಜೆಪಿಗರು ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ನಿನ್ನೆಯಿಂದ ಆರಂಭಗೊಂಡ ಹೋರಾಟದಲ್ಲಿ ಹಲವರು ಭಾಗವಹಿಸಿದ್ದು, ಸರಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
ವೀಡಿಯೋ…
ಮಾಜಿ ಶಾಸಕ ಅಮೃತ ದೇಸಾಯಿ ಅವರು ಮಾತನಾಡಿ, ಸರಕಾರ ಸುಳ್ಳು ಹೇಳುತ್ತಿದೆ. ಅದನ್ನ ಬಿಟ್ಟು ಪರಿಹಾರ ನೀಡಿ ಎಂದು ಆಗ್ರಹಿಸಿದರು.
ಶಂಕರ ಕೋಮಾರದೇಸಾಯಿ, ಶಂಕರ ಶೇಳಕೆ, ರಾಜಶೇಖರ ಮುದ್ದಿ, ಶಿವು ಬೆಳಾರದ ಸೇರಿದಂತೆ ಹಲವರು ಭಾಗವಹಿಸಿದ್ದರು.