ಇಂಗಳಹಳ್ಳಿಯ ಯುವ ರೈತ ನಾಪತ್ತೆ..!

ಹುಬ್ಬಳ್ಳಿ: ಮನೆಯಲ್ಲಿದ್ದ 22 ವರ್ಷದ ಯುವ ರೈತನೋರ್ವ ಯಾರಿಗೂ ತಿಳಿಯದ ಹಾಗೇ ನಾಪತ್ತೆಯಾಗಿದ್ದು, ಆತನನ್ನ ಹುಡುಕಿ ಕೊಡುವಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನ ದಾಖಲು ಮಾಡಲಾಗಿದೆ.
ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದ ಚಂದ್ರಶೇಖರ ಶಿವಾನಂದ ಬಾರಕೇರ ಎಂಬ 22 ವಯಸ್ಸಿನ ರೈತ ಗ್ರಾಮದ ಮನೆಯಿಂದ ನಾಪತ್ತೆಯಾಗಿದ್ದಾನೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಪುಲ್ ತೋಳಿನ ಅಂಗಿ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದನೆಂದು ಚಂದ್ರಶೇಖರನ ಕುಟುಂಬದವರು ಮಾಹಿತಿಯನ್ನ ನೀಡಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು, ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದು, ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ತಕ್ಷಣವೇ ಮಾಹಿತಿಯನ್ನ ಸಮೀಪದ ಪೊಲೀಸ್ ಠಾಣೆಗೆ, ಅಥವಾ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ತಿಳಿಸಿ ಎಂದು ಕೋರಿದ್ದಾರೆ.
ಗ್ರಾಮದಲ್ಲಿ ಎಲ್ಲರೊಂದಿಗೂ ಲವಲವಿಕೆಯಿಂದ ಇರುತ್ತಿದ್ದ ಚಂದ್ರಶೇಖರ ಯಾವ ಕಾರಣಕ್ಕೆ ನಾಪತ್ತೆಯಾಗಿದ್ದಾನೆ ಎಂಬುದು ತಿಳಿದು ಬಂದಿಲ್ಲ.