ರೈತರ ಸಹಾಯಕ್ಕೆ ನಿಂತ ಸರಕಾರ: ಹೆಚ್ಚು ಕಡಲೆ ಖರೀದಿಗೆ ನಿರ್ಧಾರ

ಬೆಂಗಳೂರು: ಕೇಂದ್ರ ಸರಕಾರದ ಬೆಂಬಲ ಬೆಲೆ ಅನುದಾನದಲ್ಲಿ ಕಡಲೆ ಖರೀದಿಯನ್ನ ಆರಂಭಿಸಿದ್ದ ರಾಜ್ಯ ಸರಕಾರ ಪ್ರತಿ ಎಕರೆಗೆ 3 ಕ್ವಿಂಟಾಲ್ ಅಥವಾ ಓರ್ವ ರೈತನಿಂದ 10ಕ್ವಿಂಟಾಲ್ ಕಡಲೆ ಮಾತ್ರ ಖರೀದಿಗೆ ಮುಂದಾಗಿತ್ತು. ಆದರೆ, ರೈತರ ಫಸಲು ಹೆಚ್ಚು ಬಂದಿದ್ದರಿಂದ ಇದನ್ನ ಮಾರ್ಪಡಿಸಿ ಆದೇಶ ನೀಡಿದ್ದು, ರೈತರಿಗೆ ಅನುಕೂಲವಾಗಲಿದೆ.
ಪ್ರತಿ ರೈತರಿಂದ ಖರೀದಿ ಮಾಡುವ ಪ್ರಮಾಣ ಹೆಚ್ಚಿಗೆ ಮಾಡಿದ್ದು, ಒಟ್ಟು 15ಕ್ವಿಂಟಾಲ್ ಖರೀದಿ ಮಾಡುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಖರೀದಿಯನ್ನ ಮೇ 25ರ ವರೆಗೆ ಮುಂದುವರೆಸಲು ಕೂಡಾ ನಿರ್ಧರಿಸಲಾಗಿದೆ. ಸರಕಾರದ ಈ ನಿರ್ಣಯ ರೈತರಿಗೆ ವರದಾನವಾಗಿದೆ.