ಹುಬ್ಬಳ್ಳಿ ರೈತರಿಗೆ “ಬಿಡಾಡಿ ದನಗಳ” ಹಾವಳಿ- “ಪರಿಹಾರ” ನೀಡಲು ಪಾಲಿಕೆ ಮೇಯರ್, ಆಯುಕ್ತರಿಗೆ ಆಗ್ರಹ…!!!
1 min readಹುಬ್ಬಳ್ಳಿ: ವಾಣಿಜ್ಯನಗರಿಗೆ ಅಂಟಿಕೊಂಡಿರುವ ಹೊಲಗಳಿಗೆ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಕಂಗಾಲಾದ ರೈತರು ಇಂದು ಮಹಾನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತರನ್ನ ಭೇಟಿ ಮಾಡಿ ಅಳಲನ್ನ ತೋಡಿಕೊಂಡರು.
ಜಮೀನಿನಲ್ಲಿ ಉತ್ತಮವಾದ ಫಸಲು ಬರುತ್ತಿದ್ದು, ಬಿಡಾಡಿ ದನಗಳು ಅವುಗಳನ್ನ ನಾಶ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಪಾಲಿಕೆ ಕ್ರಮ ಜರುಗಿಸಲು ಮನವರಿಕೆ ಮಾಡಿಕೊಡಲಾಯಿತು.
ಮೇಯರ್ ರಾಮಣ್ಣ ಬಡಿಗೇರ ಹಾಗೂ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರಿಗೆ, ಮನವಿ ಮಾಡಿದ ರೈತರು, ಈಗಾಗಲೇ ಆಗಿರುವ ಬೆಳೆ ಹಾನಿಗೆ ಮಹಾನಗರ ಪಾಲಿಕೆಯಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪಾಲಿಕೆಯ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಮೋಹನ್ ಅಸುಂಡಿ, ಮಂಜುನಾಥ ಅಬ್ಬಯ್ಯ, ವಿರುಪಾಕ್ಷಗೌಡ ಈ ಪಾಟೀಲ್, ಮುದುಕಪ್ಪ ನಂದಿಹಳ್ಳಿ, ಪರ್ವತಪ್ಪ ಬಳಗಣ್ಣವರ್, ವಿರುಪಾಕ್ಷಗೌಡರು ಪಾಟೀಲ್, ನಿಂಗನಗೌಡ್ರು ಪಾಟೀಲ್, ಪಕೀರಪ್ಪ ಕಲ್ಲನ್ನವರ್, ಗುರುಸಿದ್ದಪ್ಪ ಕಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.