ಕೃಷಿ ಭೂಮಿಯನ್ನ ಹಾಳು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳದ ಪಿಎಸೈ ವಿರುದ್ಧ ಡಿಜಿಗೆ ದೂರು

ಕೋಲಾರ: ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಕೃಷಿಗೆ ಹಾನಿ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬಡವನಪಲ್ಲಿ ಗ್ರಾಮದಲ್ಲಿ ನಡೆದಿದೆ. ಹೀಗೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಪಿಎಸೈ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ರೈತನೋರ್ವ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ರೈತ ನರಸಿಂಹಯ್ಯರಿಂದ ಪೊಲೀಸ್ ಮಾಹಾನಿರ್ದೇಶಕ ಪ್ರವೀಣ್ ಸೂದ್ ಗೆ ದೂರು ನೀಡಲಾಗಿದೆ. ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಮಾವಿನ ಗಿಡ, ಹುಣಸೇ ಗಿಡ, ಬೇವಿನ ಮರ, ರಕ್ತಚಂದನ ಗಿಡಗಳನ್ನ ಕಡಿದು, ಬಳಿಕ ಜಮೀನಿಗೆ ಬೆಂಕಿ ಇಟ್ಟು ಬೆಳೆ ಹಾನಿ ಮಾಡಲಾಗಿದೆ. ಕಳೆದ ತಿಂಗಳು 25ರ ಸಂಜೆ ನಡೆದಿದ್ದ ಈ ನಡೆದಿದ್ದು, ರಾಜಾರೆಡ್ಡಿ, ಸುರೇಂದ್ರ ರೆಡ್ಡಿ ಮತ್ತು ರಾಮ ಲಕ್ಷ್ಮಮ್ಮ ಎಂಬುವವರಿಂದ ಕೃತ್ಯವೆಸಗಿದ್ದಾರೆಂದು ರಾಯಲ್ಪಾಡು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಪಿಎಸ್ಐ ನರಸಿಂಹಮೂರ್ತಿ ಯಾವುದೇ ರೀತಿಯ ಕ್ರಮವನ್ನ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರು ರೈತ ನೀಡಿದ್ದಾರೆ.