ಅಕಾಲಿಕ ಮಳೆ: ರೈತರ ಹೊಲಗಳಿಗೆ ಭೇಟಿ ಮಾಡಿದ ಸಚಿವ

ಕೊಪ್ಪಳ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ರೈತರು ಕಂಗಾಲಾದ ಪರಿಣಾಮ ಕೃಷಿ ಸಚಿವ ಬಿ.ಸಿ.ಪಾಟೀಲ, ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಜಮೀನುಗಳಿಗೆ ಭೇಟಿ ನೀಡಿದ ಸಚಿವ ಪಾಟೀಲ, ನಾಶವಾದ ಬೆಳೆಗಳನ್ನ ನೋಡಿದರು. ಗಂಗಾವತಿ ತಾಲೂಕಿನ ಬಾಬುರೆಡ್ಡಿ ಕ್ಯಾಂಪ್, ಹಣವಾಳ, ಸಿಂಗನಾಳ ಮತ್ತು ಕ್ಯಾಂಪ್ ಜಿರಾಳ ಕಲ್ಲಗುಡಿ ಗ್ರಾಮದ ಹೊಲಗಳಿಗೆ ಭೇಟಿ ನೀಡಿದ್ರು.
ಬೆಳೆ ನಷ್ಟದ ಬಗ್ಗೆ ತಕ್ಷಣವೇ ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಪಾಟೀಲ, ರೈತರು ಆತಂಕಕ್ಕೆ ಒಳಗಾಗುವುದು ಬೇಡ. ಸರಕಾರ ಈ ಬಗ್ಗೆ ಗಮನ ಹರಿಸುತ್ತೆ ಎಂದರು.