ಧಾರವಾಡ: ಕೋಟಿ ರೂ. ಲೂಟಿ ಮಾಡಿದ ಅರಣ್ಯಾಧಿಕಾರಿಗಳು- NMR, NMMS ಡೂಪ್ಲಿಕೇಟ್…!!!
1 min readಧಾರವಾಡ: ಎಲ್ಲರೂ ಲೋಕಸಭೆ ಚುನಾವಣೆಯಲ್ಲಿ ಬಿಜಿಯಿದ್ದಾಗ ಧಾರವಾಡದ ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಹಣ ಕೊಳ್ಳೆ ಹೊಡೆಯುವುದರಲ್ಲಿ ಬಹಳಷ್ಟು ಚೆನ್ನಾಗಿ ತೊಡಗಿಸಿಕೊಂಡಿದ್ದರು ಎಂಬ ವಿಷಯ ಆರ್‌ಟಿಇ ಕಾರ್ಯಕರ್ತರು ಆಗಿರುವ ವಕೀಲರೊಬ್ಬರಿಂದ ಹೊರಗೆ ಬಂದಿದೆ.
ಹುಬ್ಬಳ್ಳಿಯ ಅರಣ್ಯ ವಲಯ ಅಧಿಕಾರಿ ಅರವಿಂದ ಕಣವಿ ಬರೋಬ್ಬರಿ ಒಂದು ಕೋಟಿ ರೂಪಾಯಿಗಳನ್ನ ನಕಲಿ ದಾಖಲೆ ಸೃಷ್ಟಿಸಿ, ಕೊಳ್ಳೆ ಹೊಡೆಯಲಾಗಿದೆ. ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಪರಿಮಳ ಹುಲಗನ್ನವರ ಅವರು ಯಾವುದೇ ತಪಾಸಣೆ ಮಾಡದೇ, ಹಣ ದುರುಪಯೋಗ ಮಾಡಿಕೊಳ್ಳಲು ಸಾಥ್ ನೀಡಿದ್ದಾರೆಂಬ ಅಂಶ ಹೊರಬಿದ್ದಿದೆ.
ಇಲಾಖೆಯ ಸಿಬ್ಬಂದಿಗಳು ಹಾಗೂ ವಾಚರ್‌ಗಳನ್ನೇ ಕೂಲಿ ಕಾರ್ಮಿಕರಂತೆ ತೋರಿಸಲಾಗಿದೆ. ದಾಖಲೆಯಲ್ಲಿ ಇರುವ ಕೂಲಿ ಕಾರ್ಮಿಕರೇ ಬೇರೆ, ಪೋಟೊದಲ್ಲಿರುವವರೇ ಬೇರೆ ಎಂಬುದು ದಾಖಲೆಗಳ ಸಮೇತ ಹೊರಬಿದ್ದಿದೆ.
ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಸುರೇಂದ್ರ ಉಗಾರೆ ಹೇಳಿದ್ದಾರೆ.