Posts Slider

Karnataka Voice

Latest Kannada News

ಹುಬ್ಬಳ್ಳಿ-ಧಾರವಾಡಕ್ಕೆ ಬಂದಿರೋದು ಎಷ್ಟು ಚಿರತೆ.. ಒಂದಾ.. ಎರಡಾ… ಮೂರಾ…!?

1 min read
Spread the love

ಧಾರವಾಡ: ವಾಣಿಜ್ಯನಗರಿ, ಧಾರವಾಡ ತಾಲೂಕಿನ ಕಬ್ಬೇನೂರ ಹಾಗೂ ಕವಲಗೇರಿಯಲ್ಲಿ ಚಿರತೆಗಳು ಕಂಡು ಬಂದಿದ್ದು, ಒಟ್ಟು ಎಷ್ಟು ಚಿರತೆಗಳಿವೆ ಎಂಬುದರ ಬಗ್ಗೆ ನಿಖರವಾದ ಮಾಹಿತಿಯನ್ನ ಇನ್ನೂ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ.

ಕಬ್ಬೇನೂರ ಬಳಿ ಕಂಡು ಬಂದ ಹೆಜ್ಜೆ ಗುರುತು

ಹುಬ್ಬಳ್ಳಿಯ ನೃಪತುಂಗಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿನ ಚಿರತೆ ಕಾಣುತ್ತಿದ್ದ ಸಮಯದಲ್ಲಿಯೇ ಧಾರವಾಡ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಚಿರತೆ ಕಂಡು ಬಂದಿಲ್ಲ.

ಹಾರೋಬೆಳವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಬ್ಬೇನೂರದ ಬಳಿಯಲ್ಲಿ ಕಂಡು ಬಂದ ಸಮಯದಲ್ಲಿಯೂ ಹುಬ್ಬಳ್ಳಿಯಾಗಲಿ, ಕವಲಗೇರಿಯಲ್ಲಾಗಲಿ ಕಂಡು ಬಂದಿಲ್ಲ. ಹಾಗೇ ನೋಡಿದ್ರೇ, ಕಬ್ಬೇನೂರ ಬಳಿ ಹೆಜ್ಜೆ ಗುರುತು ಸಿಕ್ಕ ಮೂರು ಗಂಟೆಯ ನಂತರ ಕವಲಗೇರಿ ಗ್ರಾಮದ ಉಪ್ಪಾರವರ ಹೊಲದಲ್ಲಿ ಚಿರತೆ ಕಂಡು ಬಂದಿದೆ.

ಕಬ್ಬೇನೂರದಿಂದ ಕವಲಗೇರಿ ಸುಮಾರು 23 ಕಿಲೋಮೀಟರ್ ಇದ್ದರೂ 15ನಿಮಿಷದಲ್ಲಿ ಹೋಗಬಹುದಾಗಿದೆ. ಪ್ರಮುಖವಾದ ರಸ್ತೆಯಲ್ಲಿ ಹಾಗೇ ಹೋಗಬಹುದಾದರೇ, ಅಡ್ಡ ದಾರಿಯಲ್ಲಿ ಇನ್ನೂ ವೇಗವಾಗಿಯೇ ತಲುಪಬಹುದು.

ಕಬ್ಬೇನೂರಲ್ಲಿ ಕಂಡು ಬಂದ ಚಿರತೆಯೂ ಹಾಗೂ ಕವಲಗೇರಿಯಲ್ಲಿ ಕಂಡು ಬರುತ್ತಿರುವ ಚಿರತೆ ಒಂದೇನಾ ಎಂಬ ಪ್ರಶ್ನೆ ಮೂಡುತ್ತಿದೆ. ಹಾಗಾದ್ರೇ, ಹುಬ್ಬಳ್ಳಿಯಲ್ಲಿ ಕಂಡು ಬಂದ ಚಿರತೆ ಎಲ್ಲಿಯದು.

ಅರಣ್ಯ ಅಧಿಕಾರಿಗಳು ಚಿರತೆಯ ಹೆಜ್ಜೆ ಗುರುತಿನ ಆದಾರದ ಮೇಲೆ ಮೊದಲು ಇದನ್ನ ಕಂಡು ಹಿಡಿದು, ಸಾರ್ವಜನಿಕರಿಗೆ ತಿಳಿಸಬೇಕಿದೆ. ಧಾರವಾಡ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿರುವ ಚಿರತೆ ಒಂದೇ ಆದ್ರೆ, ಆತಂಕ ಮತ್ತಷ್ಟು ಹೆಚ್ಚಾಗಬಹುದು.

ಹುಬ್ಬಳ್ಳಿಯಲ್ಲಿ ಕಂಡು ಬಂದ ಚಿರತೆಯ ಹೆಜ್ಜೆಯ ಜೊತೆಗೂ ಇನ್ನುಳಿದ ಎರಡು ಪ್ರದೇಶದಲ್ಲಿ ಕಂಡು ಚಿರತೆಯ ಹೆಜ್ಜೆ ಗುರುತುಗಳ ಬಗ್ಗೆ ನಿಖರವಾಗಿ ಮಾಹಿತಿ ನೀಡದೇ ಹೋದರೇ, ಚಿರತೆ ಬಂತು ಚಿರತೆ ಎಂದು ಎಲ್ಲ ಕಡೆಯೂ ಹೇಳುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿಪಡಬೇಕಿಲ್ಲ.


Spread the love

Leave a Reply

Your email address will not be published. Required fields are marked *