ಅರಣ್ಯ ಇಲಾಖೆ ಕಾರ್ಯಾಚರಣೆ: ಹಿಡಿದಿದ್ದೇಷ್ಟು… ತೋರಿಸಿದ್ದೇಷ್ಟು…! ಆರೋಪಿಗಳು ಬಳಸಿದ ಕಾರು ಎಲ್ಲಿ ಸಾರ್…!

ಧಾರವಾಡ: ನಗರದಲ್ಲಿ ನಿನ್ನೆ ಸಿನೀಮಯ ರೀತಿಯಲ್ಲಿ ಕಾರ್ ಚೇಸ್ ಮಾಡಿ, ಒಳ್ಳೆಯ ಸಿನೇಮಾ ಸಿಂಗಂ ಥರದಲ್ಲಿ ಕಾರನ್ನ ಅಡ್ಡಗಟ್ಟಿ ಆರೋಪಿಗಳನ್ನ ಹಿಡಿದು, ದೊಡ್ಡದೊಂದು ಕೆಲಸ ಮಾಡಿದ್ವಿ ಎಂದು ರಾತ್ರಿಯಲ್ಲಾ ಕಳೆದು, ಬೆಳಗಾಗುವುದರೊಳಗೆ ಸಿನೇಮಾ ಫುಲ್ ಚೇಂಜ್…!

ಕಾರಿನಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದವರನ್ನ ವಶಕ್ಕೆ ಪಡೆಯುತ್ತಿರುವ ದೃಶ್ಯ..

ಹೌದು… ಧಾರವಾಡ ವಲಯ ಅರಣ್ಯ ಇಲಾಖೆಯ ನಿನ್ನೆಯಿಂದಲೂ ಕಾರ್ಯಾಚರಣೆ ನಡೆಸಿತ್ತು. ಧಾರವಾಡದ ಅಕ್ಕಳ ಬಳಗದಿಂದ ಹೊರಟ ಕಾರನ್ನ ಬೆನ್ನು ಹತ್ತಿ ಹಲವರನ್ನ ಬಂಧನ ಮಾಡಲಾಗಿತ್ತು. ಅಷ್ಟೇ ಅಲ್ಲ, ಆ ಕಾರು ಗ್ರಾಮ ಪಂಚಾಯತಿ ಸದಸ್ಯರೋರ್ವರಿಗೆ ಸಂಬಂಧಿಸಿದ್ದು ಎಂದು ಗೊತ್ತಾಗಿತ್ತು.

ಆದರೆ, ಇಂದು ಧಾರವಾಡ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಿಂದ ಮಾಹಿತಿಯ ಪ್ರಕಟನೆಯೊಂದು ಹೊರ ಬಂದಿದ್ದು, ಹೊನ್ನಾಪುರ ಗ್ರಾಮದ ಇಬ್ಬರನ್ನ ಬಂಧಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅವರನ್ನ ನಿಂಗಪ್ಪ ಕಲ್ಲಪ್ಪ ಗಸ್ತಿ ಹಾಗೂ ಪುಂಡಲೀಕ ಕಲ್ಲಪ್ಪ ಗಸ್ತಿ ಎಂಬುವವರನ್ನ ಬಂಧನ ಮಾಡಲಾಗಿದೆ.
ಬಂಧಿತರಿಂದ ಅರಣ್ಯ ಇಲಾಖೆಯಲ್ಲಿನ ಬೆಲೆಬಾಳುವ ಸಾಗವಾನಿ ಮರಗಳನ್ನ ಕಡಿದು ಮಾರಾಟ ಮಾಡುತ್ತಿದ್ದ 1ಲಕ್ಷ ಮೌಲ್ಯದ ಪಿಠೋಪಕರಣಗಳನ್ನ ವಶಕ್ಕೆ ಪಡೆಯಲಾಗಿದೆ. ಇದನ್ನ ಸಾಗಾಟ ಮಾಡಲು ಬಳಕೆ ಮಾಡಿದ ಅಶೋಕ ಲೈಲ್ಯಾಂಡ ವಾಹನವನ್ನೂ ವಶಕ್ಕೆ ಪಡೆಯಲಾಗಿದೆಯಂತೆ.
ಹಾಗಾದರೇ, ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕ ಕಾರು ಹಾಗೂ ಅದರಲ್ಲಿ ಪರಾರಿಯಾಗಲು ಯತ್ನಿಸಿದ ಹಲವರ ಪೈಕಿ ಉಳಿದವರು ಏನಾದರೂ ಎಂಬುದನ್ನ ಸಂಬಂಧಿಸಿದ ಅಧಿಕಾರಿಗಳೇ ಉತ್ತರ ನೀಡಬೇಕಲ್ಲವೇ…!