ಫುಟ್ಬಾಲ್ ದಂತಕಥೆ ರೊನಾಲ್ಡಿನೋ ಬಂಧನ: ಸಹೋದರನೂ ಅರೆಸ್ಟ್

ಬ್ರೆಸಿಲಿಯಾ: ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ ಬ್ರೆಜಿಲ್ ನ ರೊನಾಲ್ಡಿನೊ ಮತ್ತು ಆತನ ಸಹೋದರ ರೊಬರ್ಟೋ ಅವರನ್ನ ಬಂಧಿಸಲಾಗಿದ್ದು, ನಕಲಿ ಪಾಸ್ ಪೋರ್ಟ್ ಮತ್ತು ತಪ್ಪು ದಾಖಲೆಗಳನ್ನ ನೀಡಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ.
39ರ ಹರೆಯದ ರೊನಾಲ್ಡಿನೊ ಮತ್ತು ಆತನ ಸಹೋದರನನ್ನ ಪರಾಗ್ವೆಯ ರೆಸಾರ್ಟ್ ಯಾಚ್ ಮತ್ತು ಗಾಲ್ಪ್ ಕ್ಲಬ್ ನಲ್ಲಿ ಬಂಧಿಸಲಾಗಿದೆ ಎಂಬುದನ್ನ ಪರಾಗ್ವೆಯ ಆಂತರಿಕ ಸಚಿವಾಲಯ ಖಚಿತಪಡಿಸಿದೆ.