ಮಲಫ್ರಭೆಯಲ್ಲಿ “ಅಪರೂಪದ ಹದ್ದು ಮೀನು” ಪತ್ತೆ…

ಮಲಫ್ರಭಾ ನೀರಿನಲ್ಲಿ ಅಪರೂಪದ ಮೀನು
ಹದ್ದು ಮೀನು ಕಂಡು ಖುಷ್ ಆದ ಮೀನುಗಾರರು
ಬಾಗಲಕೋಟೆ: ಹದ್ದು ಜಾತಿಯ ಅಪರೂಪದ ಮೀನೊಂದು ಮೀನುಗಾರರ ಗಾಳಕ್ಕೆ ಬಿದ್ದ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಮಲಪ್ರಭಾ ನದಿಯಲ್ಲಿ ನಡೆದಿದೆ.
ಮೀನುಗಾರರ ಗಾಳಕ್ಕೆ ಬಿದ್ದ ಮೀನನ್ನು ಗುಳೇದಗುಡ್ಡದ ಮಾರುಕಟ್ಟೆಗೆ ತರುತ್ತಿದ್ದಂತೆ ಈ ಅಪರೂಪದ ಹದ್ದು ಜಾತಿಯ 50 ಕೆ.ಜಿ ತೂಕದ ಮೀನನ್ನು ನೋಡಿ ಗ್ರಾಹಕರು ಹಾಗೂ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..
ಗುಳೇದಗುಡ್ಡ ಪಟ್ಟಣದ ಪರಸಪ್ಪ ಭೋವಿ ಕುಬ್ಬಣ್ಣ ಚೌಹಾನ್ ಪರಸಪ್ಪ ರಾಥೋಡ್ ಆನಂದ್ ಚೌಹಾಣ್ ಮುತ್ತಣ್ಣ ಚೌಹಾಣ್ ನೀಲಪ್ಪ ಚೌಹಾನ್ ಕವಿ ರಾಥೋಡ್ ಇವರು ಮಲಪ್ರಭಾ ನದಿಯಲ್ಲಿ ಮೀನು ಹಿಡಿಯುವ ವೇಳೆಯಲ್ಲಿ ಅಪರೂಪದ ಹದ್ದು ಜಾತಿಯ ಮೀನು ಗಾಳಕ್ಕೆ ಬಿದ್ದು ಮೀನುಗಾರರಲ್ಲಿ ಬಹಳಷ್ಟು ಸಂಭ್ರಮ ಮೂಡಿದೆ ಗುಳೇದಗುಡ್ಡ ಪಟ್ಟಣದ ಮೀನುಗಾರರು ನಿತ್ಯ ಕಾಯಕದಂತೆ ಮಲಪ್ರಭಾ ನದಿಯಲ್ಲಿ ಗಾಳ ಹಾಕಿ ಮೀನುಗಳನ್ನು ಸೆರೆಹಿಡಿಯುತ್ತಿದ್ದರು ಈ ಸಂದರ್ಭದಲ್ಲಿ ಮೀನುಗಾರರು ನದಿಯಲ್ಲಿ ಗಾಳ ಬೀಸಿದಾಗ ಈ ಅಪರೂಪದ 50 ಕೆಜಿ ತೂಕದ 10 ಜಾತಿ ಮೀನು ಸಿಕ್ಕಿದೆ .
ಈ ಸಂದರ್ಭದಲ್ಲಿ 50 ಕೆಜಿ ತೂಕದ ಹದ್ದು ಜಾತಿಯ ಅಪರೂಪದ ಮೀನು ಬೇಟೆಯಾಡಿರುವುದು ವಿಶೇಷವಾಗಿದೆ ಈ ಮೀನು ನೀರು ಇಲ್ಲದೆ ನಾಲ್ಕೈದು ದಿನಗಳಿಂದ ಬದುಕಬಹುದಾಗಿದೆ ಎನ್ನುತ್ತಾರೆ ಪರಸಪ್ಪ ಭೋವಿ ಹಾಗೂ ಇತರೆ ಮೀನುಗಾರರು.