ಹುಬ್ಬಳ್ಳಿಯಲ್ಲಿ ಫೈರಿಂಗ್- ನಿಜಸತ್ಯ ಬಿಚ್ಚಿಟ್ಟ ಪೊಲೀಸ್ ಕಮೀಷನರ್….

ಹುಬ್ಬಳ್ಳಿಯಲ್ಲಿ ಮತ್ತೇ ಹಾರಿದ ಪೊಲೀಸರ ಗುಂಡೇಟು: ಕುಖ್ಯಾತ ದರೊಡೆಕೋರ ಆಸ್ಪತ್ರೆಗೆ ದಾಖಲು
ಹುಬ್ಬಳ್ಳಿ: ಹುಬ್ಬಳ್ಳಿ ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಾಹನಗಳನ್ನು ತಡೆದು ತಲ್ವಾರ್ ತೋರಿಸಿ ಚಿನ್ನಾಭರಣ, ಹಣ ಸೇರಿದಂತೆ ಮೊಬೈಲ್ ಗಳನ್ನು ದೋಚುತ್ತಿದ್ದ ನಟೋರಿಯಸ್ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡೇಟು ನೀಡಿ ದರೊಡೆಕೋರರನ್ನು ಬಂಧನ ಮಾಡಿದ್ದಾರೆ.
Exclusive videos…
ವಿನೋದ ಗುಡಿಹಾಳ ಎಂಬಾತನೇ ಮೇಲೆಯೇ ಪೊಲೀಸರು ಫೈರಿಂಗ್ ಮಾಡಿದ್ದು ಈತ ಬಳ್ಳಾರಿ, ಧಾರವಾಡ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಹೆದ್ದಾರಿಗಳಲ್ಲಿ ಮಾರಕಾಸ್ತ್ರ ತೋರಿಸಿ ವಾಹನ ಸವಾರರಿಂದ ಹಣ, ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದ.
ನಿನ್ನೇ ಕೂಡಾ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಚಾಲಕನನ್ನು ಅಡ್ಡಗಟ್ಟಿದ ಮೂವರು ತಲ್ವಾರ್ ನಿಂದ ಹಲ್ಲೆ ನಡೆಸಿ ಆತನ ಬಳಿಯಿದ್ದ 10 ಸಾವಿರ ಹಣ ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದರು. ಲಾರಿ ಚಾಲಕ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗುತ್ತಿದ್ದ ಹಾಗೆ ಕಮಿಷನರ್ ಎನ್ ಶಶಿಕುಮಾರ್ ಆರೋಪಿಗಳನ್ನು ಬಂಧನ ಮಾಡಲು ಒಂದು ತಂಡವನ್ನು ರಚನೆ ಮಾಡಿದ್ದರು.
ಈ ವೇಳೆ ಆರೋಪಿಗಳು ರಿಂಗ್ ರೋಡ್ ಬಳಿ ಇರುವ ಮಾಹಿತಿ ಮಾಹಿತಿ ಆಧರಿಸಿ ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಲು ಹೋದಾಗ, ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾದಾಗ ಆರೋಪಿ ವಿನೋದ ಗುಡಿಹಾಳ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧನ ಮಾಡಿದ್ದು, ಘಟನೆಯಲ್ಲಿ ಮೂವರು ಪೊಲೀಸರಿಗೂ ಕೂಡಾ ಗಾಯವಾಗಿದೆ