Posts Slider

Karnataka Voice

Latest Kannada News

ಹುಬ್ಬಳ್ಳಿಯ ಟಿ.ಕೆ.ಹಬೀಬ ರವಾ ಮಿಲ್ ಗೆ ಬೆಂಕಿ: ಧಗ ಧಗ ಹೊತ್ತಿದೆ ಬೆಂಕಿ…

Spread the love

ಹುಬ್ಬಳ್ಳಿ: ನಗರದ ವೀರಾಪೂರ ಓಣಿಯಲ್ಲಿರುವ ರವಾ ಮಿಲ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಮೊದಲ ಮಹಡಿಯಲ್ಲಿ ಬೆಂಕಿಯ ಕೆನ್ನಾಲಿಗೆ ಹೆಚ್ಚಿ ಆತಂಕ ಮೂಡಿಸಿದ ಘಟನೆ ಬೆಳಿಗಿನ ಜಾವ ನಡೆದಿದೆ.

ಟಿ.ಕೆ. ಹಬೀಬ ರವಾ ಮಿಲ್ ನಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳಿದ್ದು, ಅವುಗಳಿಗೆ ಬೆಂಕಿ ತಗುಲಿದ ಪರಿಣಾಮ ಪ್ರದೇಶದಲ್ಲಿ ತೀವ್ರ ಥರದ ಹೊಗೆ ಆವರಿಸಿದೆ. ಕಟ್ಟಡದ ಮೇಲ್ಬಾಗದಲ್ಲಿ ಹೊತ್ತಿರುವ ಬೆಂಕಿಯೂ ಎಲ್ಲ ಕಡೆಯೂ ಆವರಿಸಿದೆ.

ಕಿಡಕಿಯ ಮೂಲಕ ಬೆಂಕಿಯ ಕೆನ್ನಾಲಿಗೆ ಹೊರ ಬರುತ್ತಿದ್ದು, ಸ್ಥಳೀಯರು ಮತ್ತಷ್ಟು ಆತಂಕ ಎದುರಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿಯನ್ನ ನೀಡಿದ್ದು, ಸ್ಥಳಕ್ಕೆ ಅವರಿನ್ನೂ ಬರಬೇಕಿದೆ.


Spread the love

Leave a Reply

Your email address will not be published. Required fields are marked *