ಬೆಂಕಿಗೆ ಅಡಿಕೆ ಅಂಗಡಿ ಭಸ್ಮ: ಕಣ್ಣೀರಾದ ಕುಂದಗೋಳದ ಮಾಲೀಕ
ಕುಂದಗೋಳ: ವಿದ್ಯುತ್ ಅವಘಡದಿಂದ ಅಡಿಕೆ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಈಗಷ್ಟೇ ಪಟ್ಟಣದಲ್ಲಿ ಸಂಭವಿಸಿದೆ.
ನಿಂಗಪ್ಪ ಪಾಟೀಲ ಅನ್ನುವವರಿಗೆ ಸೇರಿದ ಅಂಗಡಿಯಲ್ಲಿ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನ ದಾಸ್ತಾನು ಮಾಡಲಾಗಿತ್ತು. ಸಡನ್ನಾಗಿ ಬೆಂಕಿ ತಗುಲಿ ಬಹುತೇಕ ಎಲ್ಲವೂ ನಾಶವಾಗಿದೆ.
ಘಟನೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಯಶಸ್ವಿಯಾದರಾದರೂ, ವಸ್ತುಗಳನ್ನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕೊರೋನಾ ಸಮಯದಲ್ಲಿ ವ್ಯಾಪಾರ ವಹಿವಾಟು ಅಷ್ಟಕಷ್ಟೇ ಇದ್ದಾಗಲೇ ಇಂತಹ ಅವಘಡ ಸಂಭವಿಸಿದ್ದು, ಅಂಗಡಿ ಮಾಲೀಕ ಅಕ್ಕ ಪಕ್ಕದ ಜನರ ಮುಂದೆ ಕಣ್ಣೀರಿಡುವಂತಾಗಿತ್ತು.