ಶೆರೆವಾಡ ಬಳಿಯ ಕಸಬರಿಗೆ ಕಂಪನಿಗೆ ಬೆಂಕಿ: ಕಾರ್ಮಿಕರ ಚೀರಾಟ
ಸರ್ಕ್ಯೂಟ್.. ಹೊತ್ತಿ ಉರಿದ ಫ್ಯಾಕ್ಟರಿ…
ಹುಬ್ಬಳ್ಳಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡದಿಂದ ಫ್ಯಾಕ್ಟರಿಯೊಂದು ಹೊತ್ತಿ ಉರಿದಿರುವ ಘಟನೆ ಹುಬ್ಬಳ್ಳಿಯ ಶೇರವಾಡ ಗ್ರಾಮದ ಕ್ರಾಸ್ ಬಳಿಯಿರುವ ಪೊರಕೆ ( ಕಸಬರಿಗೆ ತಯಾರಿಕೆ) ಫ್ಯಾಕ್ಟರಿಯಲ್ಲಿ ನಡೆದಿದೆ.
ಧಗಧಗನೆ ಉರಿಯುತ್ತಿದ್ದ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಲಕ್ಷಾಂತರ ಮೌಲ್ಯದ ಪಿನಾಯಿಲ್ ಸುಟ್ಟು ಕರಕವಾಗಿದೆ. ಫ್ಯಾಕ್ಟರಿ ಒಳಗಡೆ ಕಾರ್ಮಿಕರು ಚೀರಾಟ ಕೇಳಿದ್ದು, ಕಾರ್ಮಿಕರು ಸಿಲುಕೊಂಡಿರುವ ಬಗ್ಗೆ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಠಾಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.