ಹುಬ್ಬಳ್ಳಿ ತಾರಿಹಾಳದ “ಪ್ಯಾಕ್ಟರಿಯಲ್ಲಿ ಬ್ಲಾಸ್ಟ್”: ಇನ್ಸಪೆಕ್ಟರ್ ರಮೇಶ ಗೋಕಾಕ ನಿರ್ಲಕ್ಷ್ಯವೇ ಕಾರಣ….

ಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಕೆಲವು ದಿನಗಳಿಂದ ತಲೆ ಎತ್ತಿರುವ ಸ್ಪಾರ್ಕರ್ ಪ್ಯಾಕ್ಟರಿಯಲ್ಲಿ ಸ್ಪೋಟಗೊಂಡಿದ್ದು, ಹತ್ತಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಶಂಕರ ದೀಕ್ಷಿತ ಎಂಬುವವರಿಗೆ ಸೇರಿದ್ದ ಪ್ಯಾಕ್ಟರಿಯನ್ನ ಕೆಲವು ದಿನಗಳಿಂದ ಆರಂಭಿಸಿದ್ದರೂ ಕೂಡಾ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸ್ ಇನ್ಸಪೆಕ್ಟರ್ ರಮೇಶ ಗೋಕಾಕ ಅವರಿಗೆ ಗಮನಕ್ಕೆ ಬಾರದೇ ಇರುವುದು ಸೋಜಿಗ ಮೂಡಿಸುವಂತಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏನಾದರೂ ನಡೆಯಬಹುದು ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.
ಸ್ಲಗ್:- ಸ್ಪಾರ್ಕಲ್ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ..!
ಹೊರವಲಯದ ತಾರಿಹಾಳ ಕೈಗಾರಿಕ ಪ್ರದೇಶದಲ್ಲಿ ಬಾರಿ ಅಗ್ನಿ ಅವಘಡ ಸಂಭವಿಸಿದೆ.
ಬರ್ತಡೇ ಸಭೆ ಸಮಾರಂಭಗಳಲ್ಲಿ ಕೇಕ್ ಮೇಲೆ ಬೆಳಗಿಸುವ ಸ್ಪಾರ್ಕರ್ ಕ್ಯಾಂಡಲ್ ಉತ್ಪಾದಿಸುವ ಫ್ಯಾಕ್ಟರಿಯಲ್ಲಿ ಈ ಅವಘಡ ಸಂಭವಿಸಿದ್ದು, ಹತ್ತಕ್ಕೂ ಹೆಚ್ಚು ಕಾರ್ಮಿಕರು ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದಾರೆ. ಅವಘಡದಲ್ಲಿ ಸಾವನ್ನಪ್ಪಿದವರ ಬಗ್ಗೆ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ.
ಮದ್ದು ತುಂಬಿದ್ದ ಬ್ಯಾರಲ್ ಸ್ಫೋಟಗೊಂಡು ಈ ಅವಘಡ ಸಂಭಿಸಿದ್ದು, ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಜೀವ ಉಳಿಸಿಕೊಳ್ಳಲು ಓಡಿ ಹೋರ ಬಂದಿದ್ದಾರೆ. ಆದ್ರೇ ಅಷ್ಟೋತ್ತಿಗಾಗಲೇ ಹತ್ತಕ್ಕೂ ಹೆಚ್ಚು ಕಾರ್ಮಿಕರ ಮೈ-ಕೈ ತುಂಬ ಬೆಂಕಿ ಅವರಿಸಿದ್ದು ಚೀರಾಡುತ್ತೇ ಓಡಿ ಬಂದವರನ್ನು ಸ್ಥಳಿಯರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಳುಗಳ ಚೀರಾಟತ್ತು ನಡು ರಸ್ತೆ ಮೇಲೆ ಬಿದ್ದಿರುವ ಮನಕಲಕುವ ದೃಶ್ಯ ಘಟನೆ ತೀವ್ರತೆಯನ್ನ ಸಾರುವಂತಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರ ಸಾಹಸ ಪಡಬೇಕಾಯಿತು. ಆರಂಭದಲ್ಲಿ ಬೆಂಕಿ ನಂದಿಸಲು ನೀರು ಹರಿಸುತ್ತಿದ್ದಂತೆ ಸಂಗ್ರಹಗಾರದಲ್ಲಿದ್ದ ಮದ್ದು ಹಾಗು ಸಿಲಿಂಡರ್ ಗಳು ಸ್ಫೋಟಗೊಳ್ಳಲಾರಂಭಿಸಿದವು. ಇದರಿಂದ ಕಾರ್ಯಚರಣೆ ಮತ್ತಷ್ಟು ವಿಳಂಬವಾಯಿತ್ತು. ಘಟನೆ ಸುದ್ದಿ ತಿಳಿದು ಜನರು ತಂಡೋಪ ತಂಡವಾಗಿ ಜಮಾಯಿಸಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಘಟನಾ ಸ್ಥಳಕ್ಕೆ ಶಾಸಕ ಅರವಿಂದ್ ಬೆಲ್ಲದ ಭೇಟಿ ನೀಡಿದ್ದು, ತಬ್ಸಮ್ ಎಂಬುವವರಿಗೆ ಸೇರಿದ ಫ್ಯಾಕ್ಟರಿ ಇದಾಗಿದ್ದು, ಗಾಯಳುಗಳನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.