ದಡ್ಡಿಕಮಲಾಪೂರದಲ್ಲಿ ಅವಘಡ: 9ಎಕರೆ ಕಬ್ಬು, ಮಾವಿನಮರ ಬೆಂಕಿಗಾಹುತಿ..!
1 min readಧಾರವಾಡ: ಹುಲುಸಾಗಿ ಬೆಳೆದು ಇನ್ನೇನು ಕೈಗೆ ಹತ್ತುತ್ತದೆ ಎಂದುಕೊಂಡಿದ್ದ ಕಬ್ಬಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ 9ಎಕರೆಯಲ್ಲಿ ಲಕ್ಷಾಂತರ ಮೌಲ್ಯದ ಕಬ್ಬು ಸಂಪೂರ್ಣವಾಗಿ ಸುಟ್ಟುಕರಕಲಾಗಿದ್ದು, ಇವುಗಳ ಜೊತೆಗಿದ್ದ ಮಾವಿನಮರಗಳು ಕೂಡಾ ಬೆಂಕಿಗಾಹುತಿಯಾದ ಘಟನೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರ ಗ್ರಾಮದ ಬಳಿ ಸಂಭವಿಸಿದೆ.
ಧಾರವಾಡದ ಅಶೋಕ ಮಾನೆ ಎಂಬುವವರಿಗೆ ಸೇರಿದ ಜಮೀನನ್ನ ರೈತ ನಾಗರಾಜ ಕುಲಕರ್ಣಿ ಲಾವಣಿ ಪಡೆದು ನೋಡಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಕಟಾವಗೆ ಬಂದಿದ್ದ ಕಬ್ಬಿಗೆ ಜೋತು ಬಿದ್ದ ವಿದ್ಯುತ್ ತಂತಿಯಿಂದ ಅವಘಡ ಸಂಭವಿಸಿದೆ.
ನಿರಂತರವಾಗಿ ನೀರು ಬಿಡುತ್ತ ಬೆಳೆಸಿದ್ದ ಕಬ್ಬು ಕಣ್ಣು ಮುಂದೆ ಸುಟ್ಟು ಹೋಗುವುದನ್ನ ನೋಡಿಕೊಂಡು ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ.
ಘಟನೆಯ ಬಗ್ಗೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿಯನ್ನ ರವಾನೆ ಮಾಡಿದ್ದು, ಬೆಂಕಿಯನ್ನ ನಂದಿಸಲು ಅಗ್ನಿಶಾಮಕ ದಳದವರಿಗೆ ಕಳಿಸಲಾಗುತ್ತಿದೆ. ಒಂದು ಎಕರೆ ಕಬ್ಬು ಅಂದಾಜು 40ರಿಂದ 50 ಟನ್ ಬರುತ್ತಿದೆ. ಹಾಗೇ ಲೆಕ್ಕಾಚಾರ ಮಾಡಿದರೇ ಸುಮಾರು, 360 ಟನ್ ಕಬ್ಬು ಬೆಂಕಿಗೆ ಆಹುತಿಯಾದ ಹಾಗಿದೆ.