ತಲ್ವಾರ ಪ್ರಕರಣದಲ್ಲಿ “ಗಡಿಗೆಯಲ್ಲಿ ನೀರು” ಕುಡಿದಿದ್ದು ಎಷ್ಟು ಗೊತ್ತಾ…!?

ಹುಬ್ಬಳ್ಳಿ: ನಗರದಲ್ಲಿ ತಲ್ವಾರ ಸಮೇತ ಪತ್ತೆಯಾಗಿದ್ದ ಪ್ರಕರಣವನ್ನ ಮುಚ್ಚಿ ಹಾಕುವಲ್ಲಿ ಯಶಸ್ವಿಯಾಗಿರುವ ಪೊಲೀಸರೀಗ, ಮಳೆಯಲ್ಲೂ ಬಿಸಿಯೇರಿಸಿಕೊಂಡು ತಿರುಗುತ್ತಿದ್ದು, ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿಯನ್ನ ಕೊಡಲು ಮುಂದಾಗಿದ್ದಾರೆ.

ಅದು ನವೆಂಬರ್ 8. ಅಂದು ಸರಿ ಸುಮಾರು ರಾತ್ರಿ ಒಂದೂವರೆ ಸುಮಾರಿಗೆ ಪುಂಡ ಪೋಕರಿಗಳು ತಲ್ವಾರ ಮತ್ತು ಬಡಿಗೆಯನ್ನಿಟ್ಟುಕೊಂಡು ಆಟೋದಲ್ಲಿ ತಿರುಗುತ್ತಿರುತ್ತಾರೆ. ಅದೇ ಸಮಯದಲ್ಲಿ ಎಎಸ್ಐವೊಬ್ಬರು ಅದನ್ನ ನೋಡಿದ್ದಾರೆ.
ಕೂಡಲೇ ಎಎಸ್ಐ ಹೋದ ತಕ್ಷಣವೇ ಅವರೆಲ್ಲರೂ ಓಡಿ ಹೋಗಿದ್ದಾರೆ. ಆದರೆ, ಆಟೋವನ್ನ ಸೀಜ್ ಮಾಡಿ ಠಾಣೆಗೆ ಎಎಸ್ಐ ಒಪ್ಪಿಸಿದ್ದರು. ಆದರೆ, ಅದಕ್ಷ ಅಧಿಕಾರಿಗಳು ಒಬ್ಬೋಬ್ಬರನ್ನ ಕರೆದು ‘161’ ಮಾಡಿ ಕಳಿಸಲಾಗಿದೆ ಎಂದು ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ಬಹಿರಂಗ ಮಾಡಿತ್ತು.
ಪೊಲೀಸರ ನೀಚತನವನ್ನ ಬಹಿರಂಗ ಮಾಡಿದ ತಕ್ಷಣವೇ ಎಫ್ಐಆರ್ ಮಾಡಿ, ತಾವೂ ಸಾಚಾ ಎಂದು ಹೇಳುವ ಪ್ರಯತ್ನಕ್ಕೆ ‘161’ ಗಿರಾಕಿಗಳು ಮುಂದಾಗಿದ್ದು, ಪೊಲೀಸ್ ಕಮೀಷನರ್ ಸತ್ಯವನ್ನ ಹೊರಗೆ ಹಾಕಲಿದ್ದಾರೆಂಬ ಭರವಸೆ ನಾಗರಿಕರಲ್ಲಿದೆ.