ತೇಗೂರಲ್ಲಿ (ಡಾ) ಮಂಜುನಾಥ ಇಳಿಗೇರ ವಿರುದ್ಧ DHO ಎಫ್ಐಆರ್…
1 min readತೇಗೂರ ಗ್ರಾಮದ ನಕಲಿ ವೈದ್ಯನ ವಿರುದ್ಧ ಎಪ್ಐಆರ್ ದಾಖಲಿಸಿ, ಆಸ್ಪತ್ರೆ ಸೀಜ್ ಮಾಡಿದ ಡಿಎಚ್ಓ ಮತ್ತು ತಂಡ
ಧಾರವಾಡ: ನಕಲಿ ವೈದ್ಯರು ಮತ್ತು ಅನಧಿಕೃತ ಆಸ್ಪತ್ರೆಗಳ ವಿರುದ್ಧ ತಪಾಸಣೆ ಹಾಗೂ ಕಾನೂನು ಕ್ರಮ ಆರಂಭಿಸಿರುವ ಜಿಲ್ಲಾ ಆರೋಗ್ಯ ಇಲಾಖೆ ನಿನ್ನೆ (ಜು.10) ಸಂಜೆ ಧಾರವಾಡ ತಾಲೂಕಿನ ತೇಗೂರ ಗ್ರಾಮದಲ್ಲಿ ನಕಲಿ ವೈದ್ಯನನ್ನು ಪತ್ತೆ ಹಚ್ವಿ, ಅವನ ವಿರುದ್ಧ ಎಪ್ಐಆರ್ ದಾಖಲಿಸಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ॥ಶಶಿ ಪಾಟೀಲ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಡಾ॥ತನುಜಾ ಕೆ. ಎನ್. ನೇತೃತ್ವದಲ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿಯವರು, ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಮತ್ತು ವ್ಯಾಸಾಂಗ ಮಾಡದೇ, ತೇಗೂರ ಗ್ರಾಮದಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಮಂಜುನಾಥ ಇಳಿಗೇರ ಎಂಬುವರ ಕ್ಲಿನಿಕ್ ಮೇಲೆ ದಾಳಿ ಮಾಡಿ, ಕೆಪಿಎಂಇ ಕಾಯ್ದೆ ಸೆಕ್ಷನ್ 19 ಪ್ರಕಾರ ಎಪ್‍ಐಆರ್ ದಾಖಲು ಮಾಡಿದ್ದಾರೆ.
ಈ ನಕಲಿ ವೈದ್ಯ ಯಾವುದೇ ವೈದ್ಯಕೀಯ ವಿದ್ಯಾರ್ಹತೆಯನ್ನು ಪೂರೈಸದೇ ಅಲೋಪಥಿಕ್ ಔಷದಿಗಳನ್ನು ಉಪಯೋಗಿಸುತ್ತಿದ್ದು, ಸಲಾಯಿನ್‍ಗಳನ್ನು ಹಚ್ಚುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಕ್ಲಿನಿಕ್‍ನ್ನು ಎಪ್ ಐ ಆರ್ ಮಾಡಿ ಸೀಜ್ ಮಾಡಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಶಿ ಪಾಟೀಲ ಅವರು, ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಚಿಕಿತ್ಸಾ ವಿವರಗಳನ್ನು ನೀಡಿ ರೋಗಿಗಳಿಗೆ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕೆಂದು ಸೂಚಿಸಿದರು.