ಹುಬ್ಬಳ್ಳಿ-ಧಾರವಾಡದಲ್ಲಿ ಉಗುಳಿದರೇ ದಂಡ ಫಿಕ್ಸ್: ಜಿಲ್ಲಾಧಿಕಾರಿ ಚೋಳನ್ ಆದೇಶ

ಧಾರವಾಡ: ಕೊರೋನಾ ವೈರಸ್ ಹರಡುವಿಕೆಯನ್ನ ತಡೆಗಟ್ಟಲು ಕಠಿಣ ನಿರ್ಣಯವನ್ನ ಜಾರಿಗೆ ತರಲು ಜಿಲ್ಲಾಧಿಕಾರಿ ದೀಪಾ ಚೋಳನ್ ಮುಂದಾಗಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೇ ಮತ್ತೂ ಮಾಸ್ಕ್ ಧರಿಸದೇ ತಿರುಗಾಟ ನಡೆಸಿದರೇ ದಂಡ ಪಡೆಯಲು ಆದೇಶ ನೀಡಲಾಗಿದೆ.
ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೇ ಮತ್ತು ಮಾಸ್ಕ್ ಧರಿಸದೇ ಇದ್ದರೇ ಮೊದಲ ಬಾರಿಗೆ 100ರೂ. ಎರಡನೇಯ ಬಾರಿಗೆ 200ರೂ ಮತ್ತು ಮೂರನೇಯ ಬಾರಿಗೆ 500 ದಂಡ ಹಾಕಲು ಆದೇಶ ನೀಡಲಾಗಿದ್ದು, ಜನತೆ ಇದನ್ನ ಸಂಪೂರ್ಣವಾಗಿ ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕಾಗಿದೆ.