“ಸಂಘ, ಫೈನಾನ್ಸ್” ಎಂಬ ಆಧುನಿಕ ಜೀತ- ಗ್ರಾಮೀಣರ ಬದುಕು ದುರ್ಭರ…!!!!

ಧಾರವಾಡ: ಗ್ರಾಮೀಣ ಪ್ರದೇಶದ ಪ್ರತಿ ಮನೆಯ ಅಡುಗೆ ಮನೆಯನ್ನ ಹೊಕ್ಕಿರುವ ಸಂಘ ಮತ್ತು ಫೈನಾನ್ಸ್ ಕಂಪನಿಗಳು ಸಾಲದ ರೂಪದಲ್ಲಿ ಆಧುನಿಕ ಜೀತ ಪದ್ಧತಿಯನ್ನ ಬೆಳೆಸುತ್ತಿದ್ದು, ಗ್ರಾಮಗಳ ಸ್ಥಿತಿ ಅಯೋಮಯವಾಗುತ್ತಿವೆ.
ಬ್ಯಾಂಕ್‌ಗಳಲ್ಲಿ ಸಾಲ ಕೇಳಲು ಹೋದರೇ, ಸಿಬಿಲ್ ಸೇರಿದಂತೆ ಹಲವು ದಾಖಲೆಗಳನ್ನ ಕೇಳಲಾಗತ್ತೆ. ಆದರೆ, ಈ ಸಂಘಗಳು ಮತ್ತೂ ಅದೇ ರೂಪದ ಮೈಕ್ರೋ ಪೈನಾನ್ಸ್ ವ್ಯವಹಾರ ಜನರನ್ನ ಜೀತ ಪದ್ಧತಿಗೆ ಮುಂದೂಡುತ್ತಿವೆ.
ಹಣ ಪಡೆದ ಮಹಿಳೆ ಅಥವಾ ಕುಟುಂಬ ವಾರ ವಾರ ಹಣ ತುಂಬಲೇಬೇಕು. ತುಂಬದೇ ಹೋದರೆ, ಅದೇ ಗ್ರಾಮದ ಅಥವಾ ಅದೇ ಗುಂಪಿನ ಮಹಿಳೆಯರನ್ನ “ಛೂ” ಬಿಡಲಾಗತ್ತೆ. ಹಾಗಾಗಿ, ಹಣ ಪಡೆದವರು ಜೀತದ ರೀತಿಯಲ್ಲಿ ಕಾರ್ಯನಿರ್ವಹಿಸುವ ಸ್ಥಿತಿಯಿದೆ.
ಸರಕಾರ ಹಾಗೂ ಆಡಳಿತ ನಡೆಸುವ ಅಧಿಕಾರಿಗಳು ಪ್ರತಿ ಗ್ರಾಮದಲ್ಲಿ ನಡೆಯುತ್ತಿರುವ ಈ ಆಧುನಿಕ ಜೀತ ಪದ್ಧತಿ ಬೆಳೆಯುತ್ತಿರುವ ಬಗ್ಗೆ ಗಮನ ನೀಡಬೇಕಿದೆ. ಸಾಲ ಪಡೆದು ಊರ ಬಿಟ್ಟವರ ಸಂಖ್ಯೆಯ ಮಹಿಳೆಯರ ಸ್ಥಿತಿ ಏನಾಗಿದೆ ಎಂಬ ಕುರಿತು ಮಾನವೀಯ ಕಾಳಜಿ ಹೊಂದಿದ್ದರೇ, ಆಡಳಿತ ನಡೆಸುವವರು ಮಾಡಬೇಕಿದೆ.