ಸಿನೇಮಾ ಸ್ಟೈಲ್‌ನಲ್ಲಿ ಸಾಗಾಟ- 15ಕೋಟಿ ಗಾಂಜಾ ವಶ: Exclusive Video
ಸಿನೇಮಾ ಮಾದರಿಯಲ್ಲಿ ಸಾಗಾಟ
ಖಚಿತ ಮಾಹಿತಿ ಮೇರೆಗೆ ದಾಳಿ
ಬೀದರ: ಬೆಂಗಳೂರು ಎನ್‌ಸಿಬಿ ತಂಡ ಹಾಗೂ ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ 15 ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಿರುವ ಘಟನೆ ಸಂಭವಿಸಿದೆ.
Exclusive videos…
ಓಡಿಶಾ ರಾಜ್ಯದ ಮಲ್ಕಾನ್ಗಿರಿ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಗಾಂಜಾ ತುಂಬಿಕೊಂಡು ಮಹಾರಾಷ್ಟ್ರ ಮಾರ್ಗವಾಗಿ ಸಾಗಾಟಕ್ಕೆ ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಎನ್‌ಸಿಬಿ ತಂಡ ದಾಳಿ ನಡೆಸಿ 15 ಕೋಟಿ ಮೌಲ್ಯದ ಗಾಂಜಾ ಜೊತೆಗೆ ಇಬ್ಬರು ಆರೋಪಿಗಳನ್ನ ಹೆಡಮುರಿಗೆ ಕಟ್ಟಿದ್ದಾರೆ.
ಅಕ್ರಮ ಗಾಂಜಾ ಸಾಗಾಟ ಕುರಿತು ಖಚಿತ ಮಾಹಿತಿ ಮೇರೆಗೆ ಎನ್‌ಸಿಬಿ ತಂಡ ಹಿಂಬಾಲಿಸಿ, ಔರಾದ್‌ನ ವನಮಾರಪಳ್ಳಿ ಬಳಿ ಸಿಪಿಐ ರಘುವೀರಸಿಂಗ್ ತಂಡ ದಾಳಿ ನಡೆಸಿದ್ದಾರೆ.
ಖದೀಮರು ಲಾರಿಯಲ್ಲಿ ಸಿಮೆಂಟ್ ಇಟ್ಟಿಗೆ ತುಂಬಿದ್ದು ಒಳಗಡೆ ಗಾಂಜಾ ಪ್ಯಾಕೇಟ್ಗಳನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದರು. ಅಕ್ರಮ ಸಾಗಣೆ ಪ್ರಕರಣದಲ್ಲಿ ಬೀದರನ ಹುಮನಾಬಾದ ತಾಲ್ಲೂಕಿನ ಹಂದಿಕೇರಾ ಗ್ರಾಮದ ಇಬ್ಬರು ಆರೋಪಗಳನ್ನು ಬಂಧಿಸಲಾಗಿದೆ..
1500 ಕೆ.ಜಿ ಗಾಂಜಾ ಇದ್ದು ಅಂದಾಜು 15 ಕೋಟಿ ರೂಪಾಯಿ ಮೌಲ್ಯ ಹೊಂದಿದ್ದು, ತನಿಖೆ ಮುಂದುವರೆದಿದೆ ಎಂದು ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಮಾಹಿತಿ ನೀಡಿದ್ದಾರೆ.