ಚಿತ್ರನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹಾರ್ಟ್ ಅಟ್ಯಾಕ್…
ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದಾಗ ಹಾರ್ಟ್ ಅಟ್ಯಾಕ್
ನಿವೃತ್ತ ಪೊಲೀಸ್ ಅಧಿಕಾರಿ ಕೆ.ಶಿವರಾಂ ಪುತ್ರಿ
ಬೆಂಗಳೂರು: ಪ್ರವಾಸಕ್ಕೆ ಹೋದ ಸಮಯದಲ್ಲಿ ಚಿನಾರಿಮುತ್ತ ಖ್ಯಾತಿಯ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೌರ್ಯ ಎಂಬ ಪುತ್ರನನ್ನ ಹೊಂದಿರುವ ಸ್ಪಂದನಾ ಅವರು ಸಾವು ಚಿತ್ರರಂಗದಲ್ಲಿ ದಿಗ್ಭ್ರಮೆ ಮೂಡಿಸಿದ್ದು, ರಾಜಕುಮಾರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಕೆ.ಶಿವರಾಂ ಪುತ್ರಿಯಾಗಿದ್ದ ಸ್ಪಂದನಾ ಅವರು 2016 ರ ಅಗಸ್ಟ್ 26 ರಂದು ನಟ ವಿಜಯ ರಾಘವೇಂದ್ರ ಅವರನ್ನ ಮದುವೆಯಾಗಿದ್ದರು. ಸ್ಪಂದನಾ ಕೂಡಾ ಅಪೂರ್ವ ಎಂಬ ಚಲನಚಿತ್ರದಲ್ಲಿ ಅತಿಥಿ ನಟರಾಗಿ ಅಭಿನಯಿಸಿದ್ದರು.