ಧಾರವಾಡದಲ್ಲಿ ‘ದರ್ಶನ’- ವಿನಯ ಕುಲಕರ್ಣಿ ಜೊತೆ ಜೋಡೆತ್ತಿನೊಂದಿಗೆ ಚಕ್ಕಡಿಯೇರಿದ “ವಿರಾಟ್”-Exclusive Photos
ಧಾರವಾಡ: ಚಿತ್ರನಟ ದರ್ಶನ ಇಂದು ರೈತಾಪಿ ಮೂಡಿನಲ್ಲಿದ್ದರು. ಅದೇ ಕಾರಣಕ್ಕೆ ಜೋಡೆತ್ತು ಹಿಡಿದುಕೊಂಡು ವಿದ್ಯಾಕಾಶಿಯಲ್ಲಿ ಚಕ್ಕಡಿ ಏರಿ ಮಜಾ ತೆಗೆದುಕೊಂಡರು.
ಮಾಜಿ ಸಚಿವ ವಿನಯ ಕುಲಕರ್ಣಿ ಡೇರಿಯಿಂದ ಹೊಸ ಜೋಡೆತ್ತಿನೊಂದಿಗೆ ವಿಹಾರಕ್ಕೆ ಹೊರಟ ದರ್ಶನ, ಹೊಸ ತಳಿಯ ಓಟವನ್ನ ಇಷ್ಟಪಟ್ಟರು.
ಚಿತ್ರನಟ ದರ್ಶನ ಮೊದಲಿಂದಲೂ ಪ್ರಾಣಿ-ರೈತಾಪಿ ಜೀವನವನ್ನ ಇಷ್ಟಪಡುತ್ತಲೇ ಬಂದಿದ್ದಾರೆ. ಈ ಹಿಂದೆಯೂ ವಿನಯ ಕುಲಕರ್ಣಿಯವರ ಕುದುರೆಯನ್ನೂ ಸವಾರಿ ಮಾಡಿದ್ದರು ದರ್ಶನ.