ಮಂತ್ರಿ ಸ್ಥಾನ ಬೇಕೇ ಬೇಕು! ‘ಶಿಸ್ತಿನ’ ಪಕ್ಷದ ಶಾಸಕನ ಓಪನ್ ಡಿಮ್ಯಾಂಡ್!!

ಮಂತ್ರಿ ಸ್ಥಾನ ಬೇಕೇ ಬೇಕು! ‘ಶಿಸ್ತಿನ’ ಪಕ್ಷದ ಶಾಸಕನ ಓಪನ್ ಡಿಮ್ಯಾಂಡ್!
ದಾವಣಗೆರೆ ಜಿಲ್ಲೆಯಿಂದ ಮತ್ತೊಂದು ಬಹಿರಂಗ ಒತ್ತಡ
ದಾವಣಗೆರೆ: ವಚನಾನಂದ ಶ್ರೀಗಳು ಬಹಿರಂಗವಾಗಿ ಪಂಚಮಸಾಲಿ ಶಾಸಕರಿಗೆ ಮಂತ್ರಿಗಿರಿ ಕೊಡಿ ಎಂದು ಸಿಎಂ ಯಡಿಯೂರಪ್ಪಗೆ ಒತ್ತಡ ಹೇರಿದ್ದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ಶಾಸಕರೊಬ್ಬರು ವೀಡಿಯೋ ಮಾಡಿ ಹರಿಬಿಟ್ಟು, ಸಿಎಂ ಮೇಲೆ ಒತ್ತಡ ಹೇರೋದಕ್ಕೆ ಮುಂದಾಗಿದ್ದಾರೆ. ಅವರ‌್ಯಾರು ಗೊತ್ತಾ….
ಸಿಎಂ ಯಡಿಯೂರಪ್ಪ ದಾವೋಸ್‌ನಿಂದ ಬಂದ ಬೆನ್ನಲ್ಲೇ ಸಚಿವಾಕಾಂಕ್ಷಿಗಳ ಬಹಿರಂಗ ಲಾಬಿ ಆರಂಭವಾಗಿದೆ.
ನನಗೆ ಮಂತ್ರಿ ಪಟ್ಟ ಬೇಕೇ ಬೇಕು ಎಂಬ ಹೇಳಿಕೆಯ ವೀಡಿಯೋವನ್ನ ಚೆನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹರಿಬಿಟ್ಟಿದ್ದಾರೆ.
ಮಂತ್ರಿ ಪಟ್ಟಕ್ಕಾಗಿ ವೀಡಿಯೋ ಒತ್ತಡ ತಂತ್ರ ಆರಂಭಿಸಿದ ಮಾಡಾಳ್. ಈ ಮೂಲಕ ಪ್ರೆಷರ್ ಪಾಲಿಟಿಕ್ಸ್ನ ಶಾಸಕರು ಆರಂಭಿಸಿದ್ದಾರೆ. ತೀವ್ರ ಒತ್ತಡದಲ್ಲಿರುವ ಸಿಎಂ ಯಡಿಯೂರಪ್ಪ ಮೇಲೆ ಈಗ ವೀಡಿಯೋ ಪ್ರೆಷರ್!
ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಮಾತಾಡಿದಾಗ, ಅಲ್ಲಿಯೇ ತಮ್ಮ ಅಸಮಾಧಾನವ್ಯಕ್ತಪಡಿಸಿದ್ದರು. ಈಗ ಅದೇ ಜಿಲ್ಲೆಯಿಂದ ವೀಡಿಯೋ ಹೊರಗೆ ಬಂದಿರೋದು ಸಿಎಂ ಯಡಿಯೂರಪ್ಪನವರಿಗೆ ಮತ್ತಷ್ಟು ಗೊಂದಲವನ್ನುಂಟು ಮಾಡುವ ಸಾಧ್ಯತೆಯಿದೆ.
ಶಿಸ್ತಿನ ಪಕ್ಷದ ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿದೆ ನೋಡಿ…