ಕೈಕಾಲು ತೊಳೆಯಲ ಹೋಗಿ: ಹೊಂಡದಲ್ಲಿ ಮುಳುಗಿ ತಂದೆ-ಮಗ ಸಾವು

ದಾವಣಗೆರೆ: ತಾಲೂಕಿನ ಶಂಕರನಹಳ್ಳಿ ಗ್ರಾಮದ ಹೊರವಲಯದ ಹೊಂಡದಲ್ಲಿ ಕೈಕಾಲು ತೊಳೆಯಲು ಹೋಗಿ ಅನಾಹುತ ನಡೆದಿದ್ದು, ತಂದೆ ಮತ್ತು ಪುತ್ರ ಸಾವಿಗೀಡಾಗಿದ್ದಾರೆ.
ತಂದೆ ಕಿರಣಕುಮಾರ, ಮಗ ಸೃಜನ್ ಸಾವನ್ನಪ್ಪಿದವರು. ಪುತ್ರನ ಶವ ಪತ್ತೆಯಾಗಿದ್ದು, ತಂದೆ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಪೊಲೀಸ್, ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಂದ ಹುಡುಕಾಟ ಮುಂದುರೆದಿದೆ. ಇದೇ ಹೊಂಡದಲ್ಲಿ ಈ ಹಿಂದೆ ಇಬ್ಬರ ಸಾವಿಗೀಡಾಗಿದ್ದರು. ಹೊಂಡ ಮುಚ್ಚುವಂತೆ ಗ್ರಾಮಸ್ಥರ ಆಗ್ರಹಿಸಿದ್ದರು ಯಾವುದೇ ಕ್ರಮ ಜರುಗಿಸಿಲ್ಲ. ಇದೀಗ ಮತ್ತೊಂದು ಘಟನೆ ನಡೆದಿದ್ದು, ಈಗಲಾದರೂ ಇಲಾಖೆಯವರು ಎಚ್ಚೆತ್ತುಕೊಳ್ಳುತ್ತಾರಾ.. ಕಾದು ನೋಡಬೇಕಿದೆ.