Posts Slider

Karnataka Voice

Latest Kannada News

ಧಾರವಾಡ: 4ಹೆಣ್ಣುಮಕ್ಕಳ ತಂದೆ ಸಾಲಗಾರರ ಕಾಟಕ್ಕೆ “ಕೆರೆಗೆ ಹಾರ”ವಾದ…!?

1 min read
Spread the love

ಧಾರವಾಡ: ನಾಲ್ಕು ಹೆಣ್ಣು ಮಕ್ಕಳ ತಂದೆಯೋರ್ವ ಸಾಲದಿಂದ ಬೇಸತ್ತು ಕೆಲಗೇರಿಯ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇಂದು ಬೆಳಕಿಗೆ ಬಂದಿದೆ.

ಸಾಧನಕೇರಿಯ ಮಂಗಳಗಟ್ಟಿ ಪ್ಲಾಟ್ ನಿವಾಸಿಯಾದ ದಾದಾಫೀರ್ ಬಿಸ್ತಿ ಎಂಬ ದುರ್ಧೈವಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈದ್‌ಮಿಲಾದ್ ದಿನದಂದೇ ಮನೆಯಿಂದ ಕಾಣೆಯಾಗಿದ್ದ ಈತ, ಇಂದು ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ದಾದಾಫೀರ್, ನಾಲ್ಕು ಹೆಣ್ಣು ಮಕ್ಕಳನ್ನ ಹೊಂದಿದ್ದ. ನಾಡಿದ್ದು ಹಿರಿಯ ಮಗಳ “ಖುರಾನ್ ಹದಿಯಾ” ಕಾರ್ಯಕ್ರಮ ಹಮ್ಮಿಕೊಂಡಿದ್ದರು. ವಿಪರ್ಯಾಸವೆಂದರೆ, ಇದೇ ಉಪನಗರ ಪೊಲೀಸ್ ಠಾಣೆಯಲ್ಲಿ ‘ಮೈಕ್’ ಹಚ್ವಲು ಪರವಾನಿಗೆ ಕೂಡಾ ಇಂದೇ ಪಡೆದಿದ್ದರಂತೆ.

ದಾದಾಫೀರ್ ಸಾಲ ಮಾಡಿದ್ದನೆಂದು ಮನೆಯವರು ಹೇಳುತ್ತಿದ್ದಾರೆ. ಆದರೆ, ಯಾರವರು ಎಂಬ ಮಾಹಿತಿಯನ್ನ ಹೇಳುತ್ತಿಲ್ಲ. ಹೀಗಾಗಿ ಪೊಲೀಸರು ಕೂಡಾ, ನಿಖರ ಮಾಹಿತಿಯಿಲ್ಲದೇ ಪರದಾಡುವ ಸ್ಥಿತಿ ಬಂದೊದಗಿದೆ.

ಹಣ ಕೊಟ್ಟು ಬಡ್ಡಿ ಕೇಳುವವರ ವಿರುದ್ಧ ಪೊಲೀಸರು ಈಗಾಗಲೇ ಸಮರ ಸಾರಿದ್ದು, ಇದಕ್ಕೆ ಸಂತ್ರಸ್ಥರು ಅಥವಾ ತೊಂದರೆಗೆ ಒಳಗಾದವರ ಕುಟುಂಬದ ಸದಸ್ಯರು ಪೊಲೀಸರಿಗೆ ಸಾಥ್ ನೀಡಬೇಕಿದೆ.


Spread the love

Leave a Reply

Your email address will not be published. Required fields are marked *

You may have missed