ಧಾರವಾಡದಲ್ಲಿ ತಂದೆ-ಮಗ ಕೊರೋನಾಗೆ ಬಲಿ… ಬೆಚ್ಚಿಬಿದ್ದ ವರ್ತಕರು…!

Pneumonia coronavirus
ಧಾರವಾಡ: ನಗರದ ಹಿರಿಯ ವರ್ತಕ ರವೀಂದ್ರ ವಸ್ತ್ರದ ಹಾಗೂ ಅವರ ಮಗ ವಿಶ್ವನಾಥ ವಸ್ತ್ರದ ಕೊರೋನಾದಿಂದ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ಸೋಮವಾರ ನಡೆದಿದೆ.

ಕಳೆದ ನಾಲ್ಕು ದಿನಗಳಿಂದ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರ ಪೈಕಿ ಇಬ್ಬರು ಸಾವಿಗೀಡಾಗಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕೊರೋನಾದಿಂದ ಒಂದೇ ದಿನ ತಂದೆ ಮಗ ಸಾವನ್ನಪ್ಪಿರುವುದು ಅವರಿಗೆ ದಿಕ್ಕೇ ತೋಚದಂತಾಗಿದೆ. ಕುಟುಂಬದ ಇನ್ನಿಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಲಾಗಿದೆ.
ಧಾರವಾಡದ ಅಕ್ಕಿಪೇಟೆಯಲ್ಲಿ ಕಳೆದ ಹಲವು ದಶಕಗಳಿಂದ ಕಿರಾಣಿ ಅಂಗಡಿ ನಡೆಸುತ್ತಿದ್ದ ತಂದೆ ರವೀಂದ್ರ ಹಾಗೂ ಮಗ ವಿಶ್ವನಾಥ ವಸ್ತದ ಧಾರವಾಡದ ಸನ್ಮತಿನಗರದ ನಿವಾಸಿಗಳಾಗಿದ್ದಾರೆ.