ಗಂಡ-ಹೆಂಡತಿ ಮತ್ತೂ ‘ಆ’ ಗ್ರಾಮ: ಹೆಂಗಿದೆ ಗೊತ್ತಾ ಇವರಿಬ್ಬರ ಜೋಡಿ..!
1 min readಬೆಳಗಾವಿ: ದೇಶದಲ್ಲಿ ಮೊದಲು ಗ್ರಾಪಂ ಚುನಾವಣೆ ಬಡವರ ಚುನಾವಣೆಯಾಗಿತ್ತು. ಅದು ಈಗ ಶ್ರೀಮಂತರ ಚುನಾವಣೆಯಾಗಿ ಮಾರ್ಪಟ್ಟಿದ್ದು, ಬೆಳಗಾವಿ ಜಿಲ್ಲೆಯ ಕಲವೇ ಕೆಲವು ಗ್ರಾಮದಲ್ಲಿ ಗ್ರಾಮದ ಜನರ ಸೇವೆ ಮಾಡುತ್ತಿರುವ ಸದಸ್ಯರ ಬಗ್ಗೆ ನಾವು ನಿಮಗೆ ತೋರಿಸುತ್ತೇವೆ ಬನ್ನಿ.. ಹೌದು… ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ದಂಪತಿಗಳೇ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರಾಗಿ ಗ್ರಾಮದ ಜನರ ಸೇವೆ ಮಾಡುತ್ತಿದ್ದಾರೆ.
ಕಳೆದ 20 ವರ್ಷದಿಂದ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಗ್ರಾಮದ ಜನರ ಸೇವೆ ಮಾಡುವುದರ ಮೂಲಕ ಮಳಗಲಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಿರುವುದು ವಿಶೇಷವಾಗಿದೆ. ಒಮ್ಮೆ ಪತಿ ಆಯ್ಕೆಯಾದ್ರೆ ಇನ್ನೊಮ್ಮೆ ಪತ್ನಿ ಆಯ್ಕೆಯಾಗುತ್ತಾರೆ. ಕಳೆದ 2005 ರಿಂದ 2010 ರಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಪತ್ನಿ ಅಧ್ಯಕ್ಷರಾದರೆ, ಪತಿ ಸದಸ್ಯರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಬೂದನೂರ ಗ್ರಾಪಂ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿದನ ಜನರ ಸಂಕಷ್ಟಕ್ಕೆ ಮಿಡಿಯವುದರ ಜತೆಗೆ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಸವದತ್ತಿ ತಾಲೂಕಿನ ಮಳಗಲಿ ಗ್ರಾಮದ ಯಲ್ಲಪ್ಪ ಮುದಕಪ್ಪ ಮೆಟಗುಪ್ಪಿ ಹಾಗೂ ಲಕ್ಷ್ಮೀ ಯಲ್ಲಪ್ಪ ಮೆಟಗುಪ್ಪಿ ದಂಪತಿಗಳು ಈ ಗ್ರಾಮಕ್ಕೆ ಮಾದರಿಯಾಗಿದ್ದಾರೆ.
ಮೊದಲ ಬಾರಿಗೆ 2000 ಸಾಲಿನ ಗ್ರಾಪಂ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಯಲ್ಲಪ್ಪ ಮೆಟಗುಪ್ಪಿ ಆಯ್ಕೆಯಾಗಿದ್ದರು. ಎರಡನೇ ಬಾರಿಗೆ 2005ರಿಂದ 2010ನೇ ಸಾಲಿನಲ್ಲಿ ಪತ್ನಿ ಲಕ್ಷ್ಮೀ ಆಯ್ಕೆಯಾಗಿ ಗ್ರಾಮದ ಸೇವೆ ಮಾಡಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಅಧ್ಯಕ್ಷ ಸ್ಥಾನಕ್ಕೆ ಪತ್ನಿ ಲಕ್ಷ್ಮೀ ಮೆಟಗುಪ್ಪಿ ಆಯ್ಕೆಯಾಗಿದ್ದು ಮತ್ತೊಂದು ವಿಶೇಷವಾಗಿದೆ.
ಪತಿ ಯಲ್ಲಪ್ಪ ಮೂರನೇ ಬಾರಿ ಆಯ್ಕೆ, ಪತ್ನಿ ಎರಡನೇ ಬಾರಿಗೆ ಆಯ್ಕೆಯಾಗಿದ್ದು ಎಲ್ಲರ ಗಮನ ಸೆಳೆದಿದ್ದಾರೆ. 2010 ರಿಂದ 2015ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಯಲ್ಲಪ್ಪ ಮೆಟಗುಪ್ಪಿ ಆಯ್ಕೆಯಾಗಿದ್ದರು. 2015-20 ಚುನಾವಣೆಯಲ್ಲಿ ಇಬ್ಬರೂ ಪತಿ ಪತ್ನಿ ಇಬ್ಬರೂ ಆಯ್ಕೆಯಾಗಿ ಗ್ರಾಮದ ಜನರ ಸೇವೆ ಮಾಡಿ ಅಭಿವೃದ್ಧಿ ಮಾಡಿರುವುದು ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ. ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿಯೂ ಯಲ್ಲಪ್ಪ ಸ್ಪರ್ಧೆ ನಡೆಸಿದ್ದು ಬಹುತೇಕ ಗೆಲವು ಅವರದ್ದೇ ಎಂದು ಅವರ ಬೆಂಬಲಿಗರು ವಿಶ್ವಾಸದಲ್ಲಿದ್ದಾರೆ.