Posts Slider

Karnataka Voice

Latest Kannada News

“ರಜತ ವೀಡಿಯೋ” ತಯಾರಾಗಿದ್ದು “ಕ್ಯಾಶಿನೋ”ದಲ್ಲಿ- ‘ಇಂದು ದೂರು ದಾಖಲು’…

1 min read
Spread the love

ಹಲವರಿಗೆ ವೀಡಿಯೋ ತುಣುಕುಗಳನ್ನ +1 (701) 450-5454 ಮೂಲಕ ಕಳಿಸಲಾಗಿದೆ..

ಹುಬ್ಬಳ್ಳಿ: ನಗರದ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಂದೇ ಬಿಂಬಿತವಾಗಿರುವ ರಜತ ಉಳ್ಳಾಗಡ್ಡಿಮಠ ಅವರ ಅಸಲಿ ವೀಡಿಯೋಗೆ ನಕಲಿ ಧ್ವನಿ ಸೇರಿಸಿರುವ ವೀಡಿಯೋ ಸಿದ್ಧಗೊಂಡಿದ್ದು ಗೋವಾದ ಕ್ಯಾಶಿನೋದಲ್ಲಿ ಎಂದು ಗೊತ್ತಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಕಾಂಗ್ರೆಸ್ ಪಕ್ಷವನ್ನ ಬೇರುಮಟ್ಟದಲ್ಲಿ ಸೆಂಟ್ರಲ್ ಕ್ಷೇತ್ರದಲ್ಲಿ ಬೆಳೆಸಿ, ಮಾಜಿ ಸಿಎಂ ಜಗದೀಶ ಶೆಟ್ಟರ ವಿರುದ್ಧ ಅಖಾಡಾದಲ್ಲಿ ಗೆಲ್ಲುವ ಭರವಸೆ ಹೊಂದಿರುವ ರಜತ ಉಳ್ಳಾಗಡ್ಡಿಮಠ ಅವರ ವರ್ಚಸ್ಸು ಕಡಿಮೆ ಮಾಡುವ ಉದ್ದೇಶ ಈ ವೀಡಿಯೋದಲ್ಲಿ ಮಾಡಲಾಗಿದೆ.

ನಕಲಿ ವೀಡಿಯೋ

https://youtu.be/etanprnurac

ಈ ನಕಲಿ ಧ್ವನಿ ಹೊಂದಿರುವ ವೀಡಿಯೋ ಸಿದ್ಧ ಮಾಡಲು ಓರ್ವ ಪತ್ರಕರ್ತ ಕ್ಯಾಶಿನೋದಲ್ಲಿದ್ದು ಸಹಕಾರ ನೀಡಿದ್ದು, ಅದನ್ನ ಬೇರೆಯವರ ಕಡೆಯಿಂದ ಮಾಧ್ಯಮಕ್ಕೆ ಹಂಚಲು ಸ್ಥಳೀಯ ಪತ್ರಕರ್ತರಿಬ್ಬರು ಸಾಕಷ್ಟು ಹೆಣಗಾಟ ನಡೆಸಿದ್ದರೆಂಬ ಮಾಹಿತಿ ಹೊರ ಬಿದ್ದಿದೆ.

ಈ ಎಲ್ಲ ವಿಷಯವನ್ನ ಸಂಗ್ರಹಿಸಿರುವ ರಜತ ಇಂದು ನಕಲಿ ವೀಡಿಯೋ ಬಗ್ಗೆ ದೂರು ದಾಖಲು ಮಾಡುವ ಸಾಧ್ಯತೆಯಿದೆ. ಈ ಮೂಲಕ “ನಮಕ್ ಹರಾಮ್” ಜನರ ಮುಖವಾಡ ಬಯಲಾಗಲಿದೆ.


Spread the love

Leave a Reply

Your email address will not be published. Required fields are marked *

You may have missed