ಕಾಲೇಜ್ ರಜೆ ‘ಸುತ್ತೋಲೆ ನಕಲಿ’: ಶಿಕ್ಷಣ ಇಲಾಖೆ ಸ್ಪಷ್ಟನೆ….
1 min readಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕಾಲೇಜುಗಳಿಗೆ ಮಾರ್ಚ್ 15ರಿಂದ ಮಾರ್ಚ್ 30ರವರೆಗೆ ರಜೆ ಘೋಷಿಸಲಾಗಿದೆ ಎಂಬ ಸುತ್ತೋಲೆ ಹರಿದಾಡುತ್ತಿದೆ. ಆದರೆ ಇದೊಂದು ನಕಲಿ ಸುತ್ತೋಲೆಯಾಗಿದ್ದು, ರಜೆ ಘೋಷಣೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಯಾರೋ ಕಿಡಿಗೇಡಿಗಳು ಸರ್ಕಾರದ ಆದೇಶ ಪ್ರತಿಯನ್ನು ನಕಲಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಮುಂಜಾಗೃತಾ ಕ್ರಮವಾಗಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ ಈ ಸುತ್ತೋಲೆ ನಕಲಿ. ಯಾರೂ ಕೂಡ ಈ ಸುತ್ತೋಲೆ ನಂಬಿ ಮೋಸ ಹೋಗಬೇಡಿ ಎಂದು ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ.
ಸರಕಾರದ ಅಧೀನ ಅಧಿಕಾರಿಗಳು ಬಿಡುಗಡೆ ಮಾಡುವ ಸುತ್ತೋಲೆ ಥರವೇ ಇದನ್ನ ರೂಪಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ದಾರಿ ತಪ್ಪಿಸುವ ಪ್ರಯತ್ನವಾಗಿದೆ.
ವೈರಲ್ ಆಗಿರುವ ಸುತ್ತೋಲೆ ನಕಲಿ ಎಂಬುದನ್ನ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.