ಫೇಸ್ ಬುಕ್ ಗೆಳತಿ “ಸುಷ್ಮಾ ಸುಸು” ಹೆಡಮುರಿಗೆ ಕಟ್ಟಿದ ಇನ್ಸಪೆಕ್ಟರ್ ವಿಜಯ ಬಿರಾದಾರ..!
1 min readಧಾರವಾಡ: ಯುವತಿಯ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಹಣ ವಂಚನೆ ಮಾಡಿದ್ದ ಆರೋಪಿಯನ್ನ ಹಾಸನ ಜಿಲ್ಲೆಯಲ್ಲಿ ಬಂಧನ ಮಾಡುವಲ್ಲಿ ಧಾರವಾಡದ ಇನ್ಸಪೆಕ್ಟರ್ ವಿಜಯ ಬಿರಾದಾರ ತಂಡ ಯಶಸ್ವಿಯಾಗಿದೆ.
ಹುಬ್ಬಳ್ಳಿ ತಾಲೂಕಿನ ಗಂಗಿವಾಳ ಗ್ರಾಮದ ರುದ್ರಗೌಡ ಮಲ್ಲನಗೌಡ ಪಾಟೀಲ ಎಂಬುವವರಿಗೆ ಸುಷ್ಮಾ ಸುಸು ಎಂಬ ಹೆಸರಿನಲ್ಲಿ ಫೇಸ್ ಬುಕ್ ಪ್ರೆಂಡ್ ರಿಕ್ವೆಸ್ಟ್ ಕಳಿಸಿ, ನಂತರ ವಾಟ್ಸಾಫ್ ನಂಬರ ಪಡೆದು, ನಿಮ್ಮನ್ನ ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಹಾಸನ ಜಿಲ್ಲೆಯ ಪ್ರತಾಪ ಡಿ.ಎಂ ಎಂಬಾತನನ್ನ ಬಂಧನ ಮಾಡಲಾಗಿದೆ.
ಮದುವೆ ಮಾಡಿಕೊಳ್ಳುವ ಆಮಿಷವೊಡ್ಡಿ ಹಲವಾರು ಜನರ ಬಳಿ 14ರಿಂದ 15 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದ ಪ್ರತಾಪ, ದೊಡ್ಡಗಿಣಿಗೇರ ಗ್ರಾಮದಲ್ಲಿ ಕಂಪ್ಯೂಟರ್ ರಿಪೇರಿ ಕೆಲಸವನ್ನ ಮಾಡುತ್ತಾನೆಂದು ಗೊತ್ತಾಗಿದೆ. ಬಂಧಿತ ಆರೋಪಿಯಿಂದ 1ಲಕ್ಷ 25 ಸಾವಿರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಕೃಷ್ಣಕಾಂತ ಅವರ ಮಾರ್ಗದರ್ಶನದಲ್ಲಿ, ಧಾರವಾಡ ಸೈಬರ್ ಕ್ರೈಂ, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವಿಜಯ ಬಿರಾದಾರ, ಸಿಬ್ಬಂದಿಗಳಾದ ಎಎಸ್ಐಗಳಾದ ವ್ಹಿ.ಎಸ್.ಬೆಳಗಾಂವಕರ, ಪಿ.ಜಿ.ಕಾಳಿ, ಆರ್.ಎಸ್.ಜಾಧವ, ಹವಾಲ್ದಾರಗಳಾದ ಎ.ಎ.ಕಾಕರ, ಬಿ.ಎನ್.ಬಳಗಣ್ಣನವರ, ಎ.ಎಂ.ನವಲೂರ, ಆರ್.ಎನ್.ಕಮದೊಡ, ಪಿ.ಜಿ.ಪಾಟೀಲ, ಸಿಬ್ಬಂದಿಗಳಾದ ಆರ್.ಎ.ಕಟ್ಟಿ, ಯು.ಎಂ.ಅಗಡಿ, ಬಿ.ಎಸ್.ದೇಮಕ್ಕನವರ ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.