ಮಾಜಿ ಶಾಸಕ ಅಮೃತ ದೇಸಾಯಿಯವರ “ಬಿಗ್ ಅಪ್ಟೇಟ್”… “12-12=24″…

ಧಾರವಾಡ: ಮಾಜಿ ಶಾಸಕ ಅಮೃತ ದೇಸಾಯಿಯವರು ಪ್ರತಿ ವರ್ಷವೂ ನಡೆಸುವ ಕಾರ್ಯಕ್ರಮದ ಕುರಿತು ಹನ್ನೆರಡು ದಿನಗಳ ಮೊದಲೇ ವಿವರವನ್ನ ನೀಡಿದ್ದು, ಅವರ ಅಭಿಮಾನಿ ಬಳಗದಲ್ಲಿ ಹುಮ್ಮಸ್ಸು ಮೂಡಿಸಿದೆ.
ಮಾಜಿ ಶಾಸಕ ಅಮೃತ ದೇಸಾಯಿ ಅವರು ಡಿಸೆಂಬರ್ 12 ರಂದು ಉಳವಿಗೆ ಪಾದಯಾತ್ರೆಯನ್ನ ಹಮ್ಮಿಕೊಂಡಿದ್ದು, ಈ ಬಾರಿ ಸಾವಿರಾರೂ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಮಾಜಿ ಶಾಸಕ ಅಮೃತ ದೇಸಾಯಿ ಅವರ ಜೊತೆಗೆ ಕುಟುಂಬದ ಹಲವರು ಭಾಗವಹಿಸಲಿದ್ದು, ಈ ಸಲ ಹಲವು ರಾಜಕಾರಣಿಗಳು ಭಾಗವಹಿಸುವ ಭರವಸೆಯಿದೆ.