ಬಿಜೆಪಿ ಮಾಜಿ ಶಾಸಕಿ ಸೀಮಾ ಮಸೂತಿಗೆ ಕಾಂಗ್ರೆಸ್‌ನ ‘MP’ ಟಿಕೆಟ್ ಕೊಡಿ…

ಧಾರವಾಡ: ಭಾರತೀಯ ಜನತಾ ಪಕ್ಷದ ಮಾಜಿ ಶಾಸಕಿ ಸೀಮಾ ಮಸೂತಿ ಅವರಿಗೆ ಕಾಂಗ್ರೆಸ್‌ನಿಂದ ಲೋಕಸಭಾ ಟಿಕೆಟ್ ನೀಡುವಂತೆ ನಿವೃತ್ತ ಹಿರಿಯ ಕಾನೂನು ಅಧಿಕಾರಿ ಅಶೋಕ ಗೌರೋಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಅಶೋಕ ಗೌರೋಜಿಯವರು ಬರೆದಿರುವ ಪತ್ರ ವೈರಲ್ ಆಗಿದ್ದು, ಮಾಜಿ ಶಾಸಕಿ ಸೀಮಾ ಮಸೂತಿ ಅವರಿಗೆ ಬಿಜೆಪಿಯಲ್ಲಿ ಅನ್ಯಾಯ ಆಗಿದೆ. ಅವರನ್ನ ಕಾಂಗ್ರೆಸ್‌ಗೆ ಕರೆದುಕೊಂಡು ಬಂದು ಟಿಕೆಟ್ ನೀಡುವಂತೆ ಕೋರಿದ್ದಾರೆ.
ರಾಮದುರ್ಗ ಮೂಲದವರಾದ ತಾವು ಧಾರವಾಡ ಜಿಲ್ಲೆಯ ಅಂಕಿ-ಅಂಶವನ್ನ ಸಂಗ್ರಹಿಸುತ್ತಿದ್ದೇನೆ ಎಂದಿರುವ ಅಶೋಕ ಅವರು, ರಜತ ಉಳ್ಳಾಗಡ್ಡಿಮಠ ಲೋಕಸಭೆ ಚುನಾವಣೆಯಲ್ಲಿ ನಿಲ್ಲೋದಿಲ್ಲವೆಂದರೇ ಸೀಮಾ ಮಸೂತಿಯವರಿಗೆ ಕೊಡುವಂತೆ ಕೇಳಿಕೊಂಡಿದ್ದಾರೆ.