ಮಾಜಿ ಶಾಸಕಿ ಸೀಮಾ ಮಸೂತಿಯವರಿಗೆ “ಮಾತೃ ವಿಯೋಗ”- ಚಿಕ್ಕಮಲ್ಲಿಗವಾಡದಲ್ಲಿ ಅಂತ್ಯಕ್ರಿಯೆ…
ಮಾಜಿ ಶಾಸಕಿ ಸೀಮಾ ಮಸೂತಿಗೆ ಮಾತೃ ವಿಯೋಗ
ಧಾರವಾಡ: ಚಿಕ್ಕಮಲ್ಲಿಗವಾಡ ಗ್ರಾಮದ ಹಿರಿಯರಾದ ಹಾಗೂ ಮಾಜಿ ಶಾಸಕಿ ಸೀಮಾ ಮಸೂತಿ ಅವರ ತಾಯಿ ಶಾಂತಮ್ಮ ಸಣ್ಣಮಲ್ಲಪ್ಪ ಅಂಗಡಿ (94) ಭಾನುವಾರ ನಿಧನರಾಗಿದ್ದಾರೆ.

ಮೃತರಿಗೆ ಮಾಜಿ ಶಾಸಕಿ ಸೀಮಾ ಅಶೋಕ ಮಸೂತಿ ಸೇರಿದಂತೆ ನಾಲ್ಕು ಪುತ್ರಿಯರು ಹಾಗೂ ಮೂವರು ಪುತ್ರರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ (ಚಿಕ್ಕಮಲ್ಲಿಗವಾಡ) ನೆರವೇರಿಸಿಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
