ಅಪ್ಪು ಪಟ್ಟಣಶೆಟ್ಟಿ ಜೊತೆಗಾರನ ಕೊಲೆ: ಬೆಚ್ಚಿಬಿದ್ದ ವಿಜಯಪುರ
ವಿಜಯಪುರ: ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜೊತೆ ಗುರುತಿಸಿಕೊಂಡಿದ್ದ ರೌಡಿಶೀಟರ್‌ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಸೊಲ್ಲಾಪುರ ರಸ್ತೆಯಲ್ಲಿರುವ ರಿಂಗ್ ರೋಡ್ ಕ್ರಾಸ ಬಳಿ ಸಂಭವಿಸಿದೆ.
ವಿಜಯಪುರದ ನಿವಾಸಿ ಸತೀಶರೆಡ್ಡಿ ನಾಗನೂರ ಎಂಬ ರೌಡಿಶೀಟರನೇ ಕೊಲೆಯಾಗಿದ್ದ, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಸತೀಶರೆಡ್ಡಿ, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅನೇಕರ ಜೊತೆ ವಿರಸವನ್ನುಂಟು ಮಾಡಿಕೊಂಡಿದ್ದ. ಆದರ್ಶನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.