ಮಾಜಿ ಶಾಸಕರ ಇಬ್ಬರು ಮೊಮ್ಮಕ್ಕಳ ಶವ ಪತ್ತೆ…!
1 min readಆಟವಾಡಲು ಹೋಗಿದ್ದ ಇಬ್ಬರು ಪುಠಾಣಿಗಳು ಇಂದು ಹೆಣವಾಗಿ ಪತ್ತೆಯಾಗಿದ್ದು, ಇಡೀ ಗ್ರಾಮಕ್ಕೆ ಗ್ರಾಮವೇ ನೀರವಮೌನದಲ್ಲಿ ಮುಳುಗಿದೆ.
ರಾಯಚೂರು: ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಮಾಜಿ ಶಾಸಕ ಹಂಪಯ್ಯ ನಾಯಕ್ ಅವರ ಇಬ್ಬರು ಮೊಮ್ಮಕ್ಕಳು ಶವಾಗಿ ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಲ್ಲಿ ನಡೆದಿದೆ.
9 ವರ್ಷದ ವರುಣ್ ಹಾಗೂ 5 ವರ್ಷದ ಸಣ್ಣಯ್ಯ ಮೃತ ಬಾಲಕರಾಗಿದ್ದಾರೆ. ಪೊಲೀಸರು ಹಾಗೂ ಕುಟುಂಬಸ್ಥರು ನಿನ್ನೆ ಮಧ್ಯಾಹ್ನದಿಂದ ಹುಡುಕಾಟ ನಡೆಸಿದ್ದರೂ ಬಾಲಕರು ಪತ್ತೆಯಾಗಿರಲಿಲ್ಲ. ಇದೀಗ ಮಕ್ಕಳ ಶವ ಹಳ್ಳದಲ್ಲಿ ಪತ್ತೆಯಾಗಿದ್ದು, ಸ್ನಾನಕ್ಕೆಂದು ಹೋದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳದಲ್ಲಿ ನೂರಾರೂ ಜನರು ಸೇರಿದ್ದು ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಎರಡು ಮಕ್ಕಳು ಕೂಡಿಕೊಂಡು ಹೋಗಿ, ಮನೆಗೆ ಮರಳಿ ಬಾರದ ಸ್ಥಿತಿ ನಿರ್ಮಾಣವಾಗಿದೆ. ಶವ ಸಿಕ್ಕಿರುವ ಸ್ಥಳಕ್ಕೆ ಆಗಮಿಸಿರುವ ಪೊಲೀಸರು, ಎರಡು ಬಾಲಕರ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಸಿರಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಪೊಲೀಸರು ಜರುಗಿಸಿದ್ದಾರೆ.